ಹೊನ್ನಾವರ : ಸ್ವಚ್ಚ ಹಾಗೂ ಸುಂದರ ಪರಿಸರದ ನಿರ್ಮಾಣಕ್ಕಾಗಿ ತಮ್ಮದೇ ತಂಡ ಕಟ್ಟಿಕೊಂಡು 100 ಸ್ವಚ್ಛತಾ ವಾರಗಳನ್ನು ಪೂರೈಸಿದ ಸ್ವಚ್ಚ ಹೊನ್ನಾವರ ಬಳಗದ ವತಿಯಿಂದ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ ನಡೆಸಲಾಯಿತು.
ಪಟ್ಟಣದ ಉದ್ಯಮ ನಗರದಲ್ಲಿರುವ ಮಹಾಸತಿ ಸಭಾಭವನದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಹಳದಿಪುರದ ಸಹಕಾರದೊಂದಿಗೆ 100 ವಾರಗಳನ್ನು ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಆರೋಗ್ಯ ಭಾರತ ಕಾರ್ಡ್ ನೋಂದಣಿ ಶಿಬಿರ ಯಶಸ್ವಿಗೊಂಡಿತು . ಈ ಶಿಬಿರದಲ್ಲಿ 200 ಕ್ಕೂ ಹೆಚ್ಚು ಫಲಾನುಭವಿಗಳು ಆರೋಗ್ಯ ಭಾರತ ಕಾರ್ಡ್ ನೋಂದಣಿ ಮಾಡಿಕೊಂಡಿದ್ದಾರೆ.