ಬೆಳಗಾವಿ: ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು ಹಾಗೂ ಬಾಣಂತಿಯನ್ನು ರಕ್ಷಣೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಯುವಕರ ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಒಂದೂವರೆ ಗಂಟೆಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿತ್ತು. ಏಕಾಏಕಿ ಮನೆಗಳಿಗೆ ನೀರು ನುಗ್ಗಿದ್ದರಿಂದ 12 ದಿನದ ಹಸುಗೂಸು ಹಾಗೂ ಬಾಣಂತಿ ಮನೆಯೊಳಗೆ ಸಿಲುಕಿದ್ದರು. ಬಳಿಕ ಮನೆ ಒಳಗಡೆ ಸಿಲುಕಿದ್ದ ಬಾಣಂತಿ ಹಸುಗೂಸು ರಕ್ಷಣೆಗೆ ಸ್ಥಳೀಯರು ಹರಸಾಹಸವನ್ನೇ ಪಡಬೇಕಾಯಿತು. ಮೊದಲು ಮೇಲ್ಚಾವಣಿ ಮೇಲೇರಿ ಹಂಚು ತೆಗೆದು ರಕ್ಷಣೆಗೆ ಯತ್ನ ಮಾಡಿಇದರು. ಆದರೆ ಅದು ಸಾಧ್ಯವಾಗದೇ ಇದ್ದಾಗ ಮನೆ ಹೊಕ್ಕು ಒಳಗಡೆ ಸಿಲುಕಿದ್ದ ಮಗು ತಾಯಿಯನ್ನ ರಕ್ಷಣೆ ಮಾಡಲಾಯಿತು.