ಭಟ್ಕಳ: ಕಳೆದ 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಳಕೆ ನಿವಾಸಿ ಈಶ್ವರ ಮಾಣಿ ನಾಯ್ಕ ಬಂಧಿತ ಆರೋಪಿ.
1975 ರಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿತ್ತು. ಇದರಲ್ಲಿಯ ಆರೋಪಿ ಸಂಖ್ಯೆ 8 ನೇಯವರಾದ ಈಶ್ವರ ಮಾಣಿ ನಾಯ್ಕ ವಿಚಾರಣಾ ಸಮಯದಿಂದ ತಲೆಮರಿಸಿಕೊಂಡಿದ್ದ.
ಆದರೆ ಈತ ಭಟ್ಕಳ ಸೊಸೈಟಿಯೊಂದರಲ್ಲಿ ಲೋನ್ ಪಡೆದಿರುವ ಆಧಾರದ ಮೇಲೆ ಆತನ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸೈ ಭರತ ಕುಮಾರ ಮಾರ್ಗದರ್ಶನದಲ್ಲಿ
ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ಉಜ್ಜಿನಕೊಪ್ಪ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆರೋಪಿ ಈಶ್ವರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.