ಮೊಬೈಲ್, ಬೈಕ್ ಕದಿಯುತ್ತಿದ್ದ ಚಾಲಾಕಿ ಚೋರರು ಖಾಕಿ ಬಲೆಗೆ.!

ಕಲಬುರಗಿ: ನಗರದ ಮಹಾತ್ಮ ಬಸವೇಶ್ವರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೊಬೈಲ್, ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಬಂಧನ ಮಾಡಿದ್ದಾರೆ. ಬಂಧಿತರಿಂದ 17 ಮೊಬೈಲ್, 8 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಆಂದ್ರಪ್ರದೇಶದ ಚಿತ್ತೂರು ನಿವಾಸಿ ಸತ್ಯವೇಲು, ಕಲಬುರಗಿ ನಗರದ ಖಾಜಾ ಕಾಲೋನಿ ನಿವಾಸಿ ಮಹಮ್ಮದ್ ಅಸ್ಪಾಕ್ ಬಂಧಿತರು. ಕಳೆದ ಕೆಲ ತಿಂಗಳಿಂದ ಕಲಬುರಗಿ ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಸೆರೆಹಿಡಿಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.