ಧಾರವಾಡ: ಸೆ. 2 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಇದರಿಂದ ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಯುವ ಎರಡು ಪ್ರೊಜೆಕ್ಟ್ಗಳ ಉದ್ಘಾಟನೆಗೆ ಮೋದಿ ಆಗಮಿಸಲಿದ್ದಾರೆ. ಪ್ರೊಜೆಕ್ಟ್ ಉದ್ಘಾಟನೆ ನಂತರ ಮೋದಿ ಬಹುದೊಡ್ಡ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ ಎಂದರು.
ಮೋಹನ್ ದಾಸ್ ಪ್ರಧಾನಿಗೆ ಮಾಡಿರುವ ಟ್ವಿಟ್ ವಿಚಾರಕ್ಕೆ ಮಾತನಾಡಿದ ಜೋಶಿ, ಅವರು ಮೊನ್ನೆ ನನಗೂ ಭೇಟಿಯಾಗಿದ್ದರು. ಮಳೆಯಿಂದ ರಸ್ತೆ ಬಹಳ ಹಾಳಾಗಿದೆ ಎಂದಿದ್ದಾರೆ. ಈ ವಿಚಾರ ಸಿಎಂ ಗಮನಕ್ಕೂ ಬಂದಿದ್ದು ಶೀಘ್ರ ರಸ್ತೆ ಸರಿ ಮಾಡುತ್ತೇವೆ ಎಂದರು.