ಗದಗ: ಮಳೆ ಹಾನಿ ಪ್ರದೇಶಗಳಿಗೆ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎನ್ ಹಾಗೂ ಎ.ಸಿ ಅನ್ನಪೂರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ಸೇರಿದಂತೆ ಹಲವು ಕಡೆ ತೆರಳಿ ಸ್ಥಳೀಯರ ಸಮಸ್ಯೆ ಆಲಿಸಿದರು.
ಶೆಟ್ಟಿಕೆರೆ ಭರ್ತಿಯಾಗಿ, ಕೊಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ಡಿಸಿ ಪರಿಹಾರದ ಭರವಸೆ ನೀಡಿದ್ದಾರೆ. ಇಟ್ಟಿಗೇರಿ ಕೆರೆ ಭರ್ತಿಯಾಗಿ, ಹಿನ್ನೀರು ನುಗ್ಗುವ ಆತಂಕ ಇರುವುದರಿಂದ ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಗೇರಿ ಹಾಗೂ ಆಶ್ರಯ ಕಾಲೋನಿಗಳಿಗೆ ಭೇಟಿ ನೀಡಿ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಸ್ಥಳೀಯರು ತಮಗಾಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.