ಭಟ್ಕಳ: ಅಕ್ರಮವಾಗಿ ಗಣಿಗಾರಿಕೆ ಮಾಡಿ ಮಣ್ಣನ್ನು ಸಾಗಿಸುತ್ತಿದ್ದ ಲಾರಿಯನ್ನು ಕಾಮಾಕ್ಷಿ ಪೆಟ್ರೋಲ್ ಪಂಪ್ ಸಮೀಪ ತಹಶೀಲ್ದಾರ್ ಸುಮಂತ ತಡೆದು ಗ್ರಾಮೀಣ ಠಾಣೆಯ ವಶಕ್ಕೆ ನೀಡಿದ್ದಾರೆ.
ಅಕ್ರಮವಾಗಿ ಗಣಿಗಾರಿಕೆ ಮಾಡಿ ಮಣ್ಣು ತುಂಬಿದ ಲಾರಿ ಭಟ್ಕಳ ಶಂಸುದ್ದಿನ್ ಸರ್ಕಲ್ ಕಡೆಯಿಂದ ವೆಂಕಟಾಪುರದ ತೆರಳುತ್ತಿತ್ತು. ಈ ವೇಳೆ ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ತಹಶೀಲ್ದಾರ್ ಸುಮಂತ ಖುದ್ದು ತಾವೇ ಲಾರಿಯನ್ನು ತಡೆದು ಭಟ್ಕಳ ಗ್ರಾಮೀಣ ಠಾಣೆಯ ವಶಕ್ಕೆ ನೀಡಿದ್ದಾರೆ