ಮುಂಡಗೋಡ: ವಾರದ ಸಂತೆ ಮಾರುಕಟ್ಟೆಯಲ್ಲಿ ಇಂದು ಪ್ರತಿವಾರಕ್ಕಿಂತ ಹೆಚ್ಚು ಜನಜಂಗುಳಿ ಉಂಟಾಗಿತ್ತು. ತರಕಾರಿ ಬೆಲೆಯಲ್ಲಿಯೂ ವಾರಕ್ಕಿಂತ 10-20 ರೂ. ಏರಿಕೆಮಾಡಲಾಗಿತ್ತು.
ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಇರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಹಬ್ಬದ ಸಂತೆ ಮಾಡಲು ಆಗಮಿಸಿದ್ದರು. ಪ್ರತಿವಾರಕ್ಕಿಂತ ಈ ವಾರ ಸಂತೆ ಮಾರುಕಟ್ಟೆಯಲ್ಲಿ ಜನರು ಹೆಚ್ಚಾಗಿದ್ದರು. ಅಲ್ಲದೇ ತರಕಾರಿಗಳ ಬೆಲೆ ಹೆಚ್ಚಾಗಿರುವುದು ಕಂಡು ಬಂತು.
ಜನರು ಮಾತ್ರ ಬೆಲೆ ಏರಿಕೆ ಆದರೂ ಕೂಡ ವಿಚಾರಿಸದೆ ತರಕಾರಿ ಖರೀದಿಸಲು ಮುಂದಾಗಿದ್ದರು. ವ್ಯಾಪಾರಸ್ಥರು ಕೂಡ ಬೆಳಗಿನಿಂದ ತರಕಾರಿ ಮಾರುವುದರಲ್ಲಿ ಬ್ಯೂಸಿ ಆಗಿದ್ದರು. ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಬಂದು ಹಬ್ಬವನ್ನು ಸರಿಯಾಗಿ ಆಚರಿಸಲಾಗದ ಜನರು ಈ ಬಾರಿ ವಿಜೃಂಭಣೆಯಿಂದ ಹಬ್ಬ ಮಾಡಲು ಮುಂದಾಗಿದ್ದಾರೆ.