ಬೀದರ್: ಹತ್ತಿ ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಔರಾದ್ ತಾಲೂಕಿನ ಕೀಶನ್ ತಾಂಡದಲ್ಲಿ ನಡೆದಿದೆ. ಔರಾದ ಚಿಕ್ಲಿ (ಜೆ) ಗ್ರಾಪಂ ವ್ಯಾಪ್ತಿಯ ಕೀಶನ್ ತಾಂಡಾದ ಪುಂಡಲಿಕ್ ತಂದೆ ತುಳಸಿರಾಂ ಬಂಧಿತ ಆರೋಪಿ.
ತನ್ನ ಸ್ವಂತ ಹೊಲದಲ್ಲಿ ಹತ್ತಿ ಬೆಳೆಗಳ ಮಧ್ಯೆ ಸುಮಾರು 15 ಕೆ.ಜಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಔರಾದ್ ವೃತ್ತ ನೀರಿಕ್ಷಕ ಮಲ್ಲಿಕಾರ್ಜುನ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ಚಿಂತಾಕಿ ಪೊಲೀಸ್ ಠಾಣಾ ಪಿಎಸ್‌ಐ ಸಿದ್ದಲಿಂಗ ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿ ಪುಂಡಲಿಕ್ ನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.