ಮುಂಡಗೋಡ: ತೆರವುಗೊಂಡ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮದ ಅಧ್ಯಕ್ಷ ಸ್ಠಾನವನ್ನು ಮರಾಠಾ ಸಮಾಜದ ಮುಖಂಡ ಎಲ್. ಟಿ. ಪಾಟೀಲ್ ಅವರಿಗೆ ನೀಡುವಂತೆ ಬಿಜೆಪಿಯಲ್ಲಿ ಒತ್ತಡ ಶುರುವಾಗಿದೆ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಲ್. ಟಿ. ಪಾಟೀಲ್ ಕಾಂಗ್ರೆಸ್‌ನಲ್ಲಿ ಅವರಿಗೆ ಒಳ್ಳೆಯ ಅವಕಾಶವಿದ್ದರೂ ಅದನ್ನು ತ್ಯಜಿಸಿ ಅನಂತ ಕುಮಾರ ಹೆಗಡೆ ಮುಖಂಡತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ನಂತರ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಭರವಸೆ ನಿಡಿದ್ದರೂ ಸಹ, ಈವರೆಗೂ ನೀಡಲಾಗಿಲ್ಲ.
ತಾಲೂಕಿನಲ್ಲಿ ಸುಮಾರು 15 ಸಾವಿರ ಮರಾಠಾ ಸಮುದಾಯದ ಜನರಿದ್ದು, ಎಲ್.ಟಿ.ಪಾಟೀಲ್ ಅದೇ ಸಮುದಾಯದವರು. ಅವರಿಗೆ ಇದುವರೆಗೆ ಯಾವುದೇ ಪ್ರಮುಖ ಹುದ್ದೆಯನ್ನು ನಿಡಲಿಲ್ಲ. ಕಳೆದ ಬಾರಿ ಎಮ್.ಎಲ್.ಸಿ ಅಭ್ಯರ್ಥಿ ಆಗಲು ಪ್ರಯತ್ನಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬೇರೆಯವರ ಪಾಲಾಯಿತು. ಇನ್ನಾದರು ಎಲ್.ಟಿ.ಪಾಟೀಲ್ ರಿಗೆ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ಖಾಲಿ ಆಗಿರುವ ನಿಗಮ ಮಂಡಳಿಯ ಸ್ಥಾನಕ್ಕೆ ಅವಕಾಶ ಕಲ್ಪಿಸುವಂತೆ ಅವರ ಅಭಿಮಾನಿಗಳ ಬಳಗ ಆಗ್ರಹಿಸಿದೆ.
ಈಗಾಗಲೇ ಯಲ್ಲಾಪುರ ಭಾಗದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಎಮ.ಎಲ್.ಸಿ ಸ್ಥಾನಕ್ಕೆ ಶಾಂತಾರಾಮ್ ಸಿದ್ದಿ ಇದ್ದಾರೆ. ಮುಂಡಗೋಡದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಲ್. ಟಿ. ಪಾಟೀಲ್ ರಿಗೆ ಈ ಹುದ್ದೆ ಸಿಗುವಂತೆ ಆಗಲಿ ಎಂಬುದು ಬಿಜೆಪಿಯವರ ಆಶಯವಾಗಿದೆ.
ಬಿಜೆಪಿ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವುದೆ ಸ್ಥಾನಮಾನ ನೀಡಿಲ್ಲಾ. ಪಕ್ಷ ನಮ್ಮನ್ನು ಬಳಸಿಕೊಳ್ಳುತ್ತಿದೆ. ಇನ್ನಾದರು ತೆರವುಗೊಂಡ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಯ ಸ್ಥಾನಕ್ಕೆ ಹಿರಿಯ ಮುಖಂಡರಾದ ಎಲ್.ಟಿ.ಪಾಟೀಲ ಅವರಿಗೆ ನೀಡಬೇಕು. ನೀಡಿದರೆ ನಮ್ಮ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠ ವಾಗಲು ಅನುಕೂಲ ಆಗುತ್ತದೆ.
– ನಾಗರಾಜ ಬೆಣ್ಣೆ, ಅಧ್ಯಕ್ಷರು, ಶಿವಾಜಿ ಕೋ ಆಪರೇಟಿವ್ ಬ್ಯಾಂಕ್



