ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಕೆಳಕ್ಕೆ ಇಳಿದು ಕೆಸರಲ್ಲಿ ಹೂತ ಘಟನೆ ತಾಲೂಕಿನ ಬಳಗಾರ ಕ್ರಾಸ್ ಬಳಿ ನಡೆದಿದೆ. ಅಂಕೋಲಾ ಕಡೆಯಿಂದ ಬಂದ ಲಾರಿ ಹೆದ್ದಾರಿ ತಿರುವಿನಲ್ಲಿ ಹೆದ್ದಾರಿ ಬಿಟ್ಟು ಕೆಳಕ್ಕೆ ಹೋಗಿದ್ದು, ಕೆಸರಲ್ಲಿ ಸಿಕ್ಕು ಹೂತಿದೆ. ಇದರಿಂದ ಕಂದಕಕ್ಕೆ ಬೀಳುವುದು ತಪ್ಪಿದೆ. ಚಾಲಕ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.



