ರೈತರ ಭೂ ಸಮಸ್ಯೆ ಪರಿಹರಿಸಲು ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಮನವಿ

ಶಿಕಾರಿಪುರ: ತಾಲೂಕಿನ ಹೊಸೂರು ಹೋಬಳಿ ಬೇಗೂರು ಗ್ರಾಮದ ರೈತರು ಇನಾಂ ಭೂ ಸಮಸ್ಯೆಯನ್ನು ಬಗೆಹರಿಸಲು ಸಂಸದ ಬಿ. ವೈ ರಾಘವೇಂದ್ರ ನೇತೃತ್ವದಲ್ಲಿ ತಹಶಿಲ್ದಾರ್ ರಿಗೆ ಮನವಿ ಸಲ್ಲಿಸಿದರು.

ಈ ವಿಷಯವಾಗಿ ಕಂದಾಯ ಸಚಿವ ಅಶೋಕ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ರೈತರಿಗೆ ತೊಂದರೆ ಇದ್ದಾಗ ಯಾವತ್ತೂ ನಿಮ್ಮೊಂದಿಗೆ ಇರುತ್ತೇವೆ. ಅಡ್ವಕೇಟ್ ಜನರಲ್, ಮುಖ್ಯಮಂತ್ರಿಯವರ ಜೊತೆ ಮತ್ತು
ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಲಾಗಿದೆ. ನಮ್ಮ ರೈತರಿಗೆ ತೊಂದರೆ ಆಗದಂತೆ ನೋಡಿಕೊಂಡು, ಈ ಸಮಸ್ಯೆ ಪರಿಹಾರ ಮಾಡುತ್ತೇವೆ.

– ಬಿ. ವೈ ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್‌. ಗುರುಮೂರ್ತಿ ಅವರು. ನಿಂಬೆಗುಂದಿ ಸಿದ್ದಲಿಂಗಣ್ಣ, ಕಬ್ಬಡ್ಡಿ ರಾಜಪ್ಪ, ಬಿಜೆಪಿ ತಾಲೂಕು ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಪುಟ್ ಸ್ವಾಮಿ, ಹಾಗೂ ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.