ಕುಮಟಾ: ತಾಲೂಕಿನ ಪುರಾಣ ಪ್ರಸಿದ್ಧ ಧಾರೇಶ್ವರ ಶ್ರೀ ಧಾರಾನಾಥ ದೇವರಿಗೆ ರಮೇಶ ಶೇಟ್ ಹಾಗೂ ಕುಟುಂಬದವರು ರಜತ ನಾಗಾಭರಣ ಹಾಗೂ ಪೀಠಗಳನ್ನು ಸಮರ್ಪಿಸಿದರು. ಸುಮಾರು 5 ಕೆಜಿ ತೂಕವಿರುವ ಈ ಆಭರಣಗಳನ್ನು ಉಡುಪಿಯ ಭಾಸ್ಕರ ಶೇಟ್ ತಂಡವು ಅತ್ಯಂತ ಸುಂದರವಾಗಿ ಸಿದ್ಧಪಡಿಸಿದೆ.
ಬುಧವಾರ ದೇವಾಲಯದಲ್ಲಿ ಅರ್ಚಕರ ಮಾರ್ಗದರ್ಶನದಲ್ಲಿ ಮೂರ್ತಿಗಳಿಗೆ ಅಗ್ನ್ಯುತ್ತಾರಣ ಮುಂತಾದ ಸಂಸ್ಕಾರಗಳನ್ನು ನೆರವೇರಿಸಿ, ದೇವರಿಗೆ ವಿಶೇಷ ಅಭಿಷೇಕ, ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯವರು ದಾನಿಗಳನ್ನು ಅಭಿನಂದಿಸಿದರು. ಊರಿನ ಭಕ್ತರು ಪೂಜೆಯ ಸಂದರ್ಭದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.