ಯಲ್ಲಾಪುರ: ಬಾಯಾರಿದವರ ಬಾಯಾರಿಕೆ ತಣಿಸುವ ಕೆಲಸವನ್ನು ಶೃದ್ಧೆಯಿಂದ ಮಾಡುತ್ತ ಬಂದಿರುವ ಜಲಸೇವಕ ಸುಬ್ರಾಯ ಮಂಜ ನಾಯ್ಕ ಅವರನ್ನು ಹಾಸಣಗಿಯ ಶಾಲೆಯಲ್ಲಿ ಗ್ರಾಮಸ್ಥರು ಗುರುತಿಸಿ ಗೌರವಿಸಿದರು.
ಮಂಚಿಕೇರಿಯಲ್ಲಿ ಕೂಲಿ ಕೆಲಸಮಾಡುವ ಸುಬ್ರಾಯ ನಾಯ್ಕ ಕಳೆದ ಒಂದೂವರೆ ದಶಕಗಳಿಂದ ತಾಲೂಕು, ಜಿಲ್ಲೆ ಹೀಗೆ ವಿವಿಧ ಭಾಗಗಳಲ್ಲಿ ಹಾಗೂ ಸಮಾರಂಭಗಳಲ್ಲಿ ನೀರು ನೀಡಿ, ದಾಹ ತಣಿಸುವ ಕೆಲಸ ಮಾಡುತ್ತ ಎಲ್ಲರ ಗಮನ ಸೆಳೆದಿದ್ದಾರೆ.