ಕಂದಾಯ ಇಲಾಖೆಗೆ ತಲೆ ನೋವು ತಂದ ಈದ್ಗಾ ಮೈದಾನ ಗಣೇಶ ಮೂರ್ತಿ ಪ್ರತಿಷ್ಠಾಪನಾ ವಿಚಾರ.!

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ ಕಂದಾಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. ನಾಗರಿಕರ ಒಕ್ಕೂಟ ವೇದಿಕೆ ನೀಡಿದ್ದ ಡೆಡ್ ಲೈನ್ ಆ. 25 ಕ್ಕೆ ಅಂತ್ಯವಾಗಲಿದೆ. ಆದರೆ ಇಲಾಖೆ ಮಾತ್ರ ಮೈದಾನದಲ್ಲಿ ಗಣೇಶೋತ್ಸವ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಇನ್ನು ಒಕ್ಕೂಟ ಆ.19 ರಂದು ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ರಿಗೆ ಮನವಿ ಸಲ್ಲಿಸಿತ್ತು. ಸದ್ಯ ಇಲಾಖೆ ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥವಾಗಿದೆ. ನಾಳೆ ಸಂಜೆಯವರೆಗೂ ಕಾದು ಒಕ್ಕೂಟದಿಂದ ಮತ್ತೊಮ್ಮೆ ಸಭೆ ನಡೆಯಲಿದ್ದು, ಮೈದಾನದಲ್ಲಿ ಹೇಗೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿಸಿ ಮೋಹನ್, ಎಂಪಿ ರೇಣುಕಾಚಾರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಮನವಿ ಮಾಡಲಾಗಿದೆ. ನಾಳೆಯ ಒಳಗೆ ಕಂದಾಯ ಇಲಾಖೆ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ ನೀಡುತ್ತಾ ಎಂದು ಕಾದು ನೋಡಬೇಕಿದೆ.