ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 8 ಫಲಾನುಭವಿ ಆಧಾರಿತ ಯೋಜನೆಗಳನ್ನು ‘ಸುವಿಧಾ ಯೋಜನೆ’ ಯಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ತಂತ್ರಾಂಶದಡಿ ಅಳವಡಿಸಿ ಲೈವ್ ಮಾಡಿರುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನರು ಹಾಗೂ 2022-23 ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್‌ಲೈನ್ ಮೂಲಕ Suvidha Website URL:https://suvidha.karnataka.gov.in ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಆನ್‌ಲೈನ್ ವೇದಿಕೆಯಲ್ಲಿ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯೆ, ನಿರುದ್ಯೋಗಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ ಇವುಗಳನ್ನು ಅಳವಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08382-200758ಗೆ ಸಂಪರ್ಕಿಸಬಹುದಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.