ಭೀಕರ ರಸ್ತೆ ಅಪಘಾತ, ಸಾರಿಗೆ ಬಸ್ ಪಲ್ಟಿ: ಇಪ್ಪತ್ತಕ್ಕೂ ಅಧಿಕ ಜನರಿಗೆ ಗಾಯ

ಹಾವೇರಿ: ಸಾರಿಗೆ ಬಸ್ ಪಲ್ಟಿಯಾಗಿ ಇಪ್ಪತ್ತಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹಿರೇಕೆರೂರು ತಾಲೂಕಿನ ಹಿರೇಮುತ್ತೂರು ಕ್ರಾಸ್ ಬಳಿ ನಡೆದಿದೆ. ರಸ್ತೆ ಪಕ್ಕಕ್ಕೆ ಬಸ್ ಪಲ್ಟಿಯಾಗಿ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸೇರಿ ಬಸ್ಸಿನ‌ ಕಿಟಕಿ ಒಡೆದು ಪ್ರಯಾಣಿಕರನ್ನು ಹೊರಕ್ಕೆ ತೆಗೆದಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.