ಗಣೇಶ ವಿಸರ್ಜನೆ ದಿನದಂದು ರಾರಾಜಿಸಲಿದೆ 10 ಸಾವಿರಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು.!

ದಾವಣಗೆರೆ: ಮುಂಬರುವ ಗಣೇಶೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು 5 ಸಾವಿರ ಸಾವರ್ಕರ್, ಸಂಗೊಳ್ಳಿ ರಾಯಣ್ಣ, ತಿಲಕ್ ಭಾವಚಿತ್ರಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಆರ್ಡರ್ ನೀಡಿದ್ದಾರೆ.

ಇನ್ನು ಹೊನ್ನಾಳಿಯಲ್ಲಿ ಸಾವರ್ಕರ್ ಹಾಗೂ ತಿಲಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಹಿಂದೂ ಮಹಾಸಭಾ ಗೌರಿ ಗಣೇಶ ಸೇವಾ ಸಮಿತಿ ಯಿಂದ ಫ್ಲೆಕ್ಸ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಇನ್ನು ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ ನಿಮ್ಮ ಮನೆಗಳಲ್ಲಿ ಟಿಪ್ಪುವಿನ ಪೋಟೋ ಹಾಕಿಕೊಳ್ಳಿ ನೋಡೋಣ ಎಂದು ಮುಸ್ಲಿಂ ಮುಖಂಡರಿಗೆ ಸವಾಲ್ ಹಾಕಿದ್ದಾರೆ. ಮುಸ್ಲಿಂ ಧರ್ಮದಲ್ಲಿ ಸತ್ತವರ ಪೋಟೋ ಹಾಕಿಕೊಳ್ಳಬಾರದು ಎಂದು ಹೇಳಿದೆ. ಆದರೆ ಕಾಂಗ್ರೆಸ್ ನಾಯಕರು ಓಟ್ ಬ್ಯಾಂಕ್ ಗಾಗಿ ಟಿಪ್ಪುವಿನ ಜಯಂತಿ, ಫ್ಲೆಕ್ಸ್ ಹಾಕಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

ಗಣೇಶ ವಿಸರ್ಜನೆ ದಿನದಂದು ಹತ್ತು ಸಾವಿರಕ್ಕೂ ಹೆಚ್ಚು ಸಾವರ್ಕರ್, ಸಂಗೊಳ್ಳಿ ರಾಯಣ್ಣ, ತಿಲಕ್ ಸೇರಿದಂತೆ ಹಲವರ ಪೋಟೋ ರಾರಾಜಿಸುತ್ತವೆ. ಈ ದೇಶದ ಪ್ರತಿ ಇಂಚು ಜಾಗ ಹಿಂದೂಗಳದ್ದು. ಎಲ್ಲಿ ಬೇಕಾದರೂ ಸಾವರ್ಕರ್ ಪೋಟೋ ಹಾಕಬಹುದು ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.