ಆಧಾರ್ & ವೋಟರ್ ಲಿಂಕ್ ಮಾಡಲು ನಿರುತ್ಸಾಹ ತೋರಿದ ಸಿಲಿಕಾನ್ ಸಿಟಿ ಮಂದಿ.! ಐಟಿ ಸಿಟಿಯಲ್ಲೇ ಯಾಕಿಷ್ಟು ನಿರ್ಲಕ್ಷ.?

ಬೆಂಗಳೂರು: ಆಧಾರ್ ಲಿಂಕ್ ಮಾಡಿಕೊಳ್ಳಲು ಸಿಲಿಕಾನ್ ಸಿಟಿ ಜನರ ನಿರುತ್ಸಾಹ ತೋರಿದ್ದು ಬಿಬಿಎಂಪಿ ಹಾಗೂ ರಾಜ್ಯ ಚುನಾವಣೆ ಆಯೋಗಕ್ಕೆ ದೋಡ್ಡ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಆ.1 ರಿಂದ ಆ. 22 ರವರೆಗೆ ಕೇವಲ 1% ಮತದಾರರು ಮಾತ್ರ ಲಿಂಕ್ ಮಾಡಿಸಿದ್ದು ಈ ಅಂಕಿ ಅಂಶ ನಿಜಕ್ಕೂಅಚ್ಚರಿ ಮೂಡಿಸಿದೆ. ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಲಕ್ಷಕ್ಕೂ ಅಧಿಕ ಇರುವ ಮತದಾರರ ಪೈಕಿ ಕೇವಲ 900 ರ ಆಸುಪಾಸಿನಷ್ಟು ಜನ ಮಾತ್ರ ವೋಟರ್ ಐಟಿಯನ್ನ ಆಧಾರ್ ಗೆ ಲಿಂಕ್ ಮಾಡಿಕೊಂಡಿದ್ದಾರೆ.

ಬೆಂಗಳೂರನ್ನ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಶೇ.40 ರಿಂದ 50 ರಷ್ಟು ಎಪಿಕ್ ಕಾರ್ಡ್ ಗಳು ಆಧಾರ್ ಗೆ ಲಿಂಗ್ ಆಗಿದೆ. ಸದ್ಯ ರಾಜ್ಯ ಚುನಾವಣಾ ಆಯೋಗದಿಂದ ಕಡ್ಡಾಯ ಮಾಡಿಲ್ಲವಾದ್ದರಿಂದ ಬೆಂಗಳೂರಿನ ಮತದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಿಂಕ್ ಮಾಡದಿದ್ದರೆ ಯಾವುದೇ ಸೇವೆ ಕಡಿತ ಮಾಡುವ ಪ್ರಸ್ತಾಪ ಸದ್ಯಕ್ಕಿಲ್ಲ. ಈ ಕುರಿತು ಚುನಾವಣಾ ಆಯೋಗದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಸದ್ಯ ಕೇವಲ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗ್ತಿದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಉಮೇಶ್ ಹೇಳಿದ್ದಾರೆ.