ಬೆಂಗಳೂರು:
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲ ಝಳ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕರುನಾಡು ಬಿಸಿಲ ಧಗಗೆ ಬಳಲಿ ಬೆಂಡಾಗಿದ್ದು, ರಣಬೇಸಿಗೆಗೆ ಜನ ಹೈರಾಣಾಗಿದ್ದಾರೆ.

ರಾಯಚೂರು ಹಾಗೂ ಕಲಬುರಗಿಯಲ್ಲಿ ಉಷ್ಣಾಂಶ 41 ಡಿಗ್ರಿ ದಾಟಿದೆ. ಬೆಂಗಳೂರಿನಲ್ಲಿ 36-37 ಡಿಗ್ರಿ ಉಷ್ಣಾಂಶವಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೊಂದು ವಾರ 40-42 ಡಿಗ್ರಿ ಉಷ್ಣಾಂಶ ಇರಲಿದೆ ತಿಳಿಸಿದ್ದಾರೆ.
ಉಷ್ಣಾಂಶ ಹೆಚ್ಚಾಗಿ ತುತ್ತಾಗುವರು ಬಡವರು, ಶ್ರಮಿಕರು, ಕೂಲಿಕಾರ್ಮಿಕರು. ಇವರು ಬಯಲಲ್ಲಿ ಕೆಲಸ ಮಾಡವುದು ಅವರ ಬದುಕಿಗೆ ಅನಿವಾರ್ಯವೂ ಹೌದು. ಸದ್ಯ ರಾಜ್ಯದಲ್ಲಿ ಬಿಸಿ ಗಾಳಿ ಅಲೆಯು ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲಿ ಕೆಲ ದಿನಗಳವರೆಗೆ ಮುಂದುವರೆಯಲಿದೆ
