
ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹ ನಾಯಕರಾಗಿ ಹೊರಹೊಮ್ಮಿದ್ದಾರೆ. ಶೇ. 68ರಷ್ಟು ಅನುಮೋದನೆ ರೇಟಿಂಗ್ ಪಡೆದು ಜಾಗತಿಕ ನಾಯಕರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. 2021ರಿಂದಲೇ ಮೋದಿ ನಿರಂತರವಾಗಿ ಅಗ್ರಸ್ಥಾನ ಕಾಯ್ದುಕೊಂಡು ಇತರ ಜಾಗತಿಕ ನಾಯಕರನ್ನು ಹಿಂದಿಕ್ಕುತ್ತಿದ್ದಾರೆ. ಇದು ಭಾರತೀಯರ ಅವರ ಮೇಲಿನ ದೃಢ ವಿಶ್ವಾಸವನ್ನೂ, ದೇಶದ ವೃದ್ಧಿಸುತ್ತಿರುವ ಜಾಗತಿಕ ಪ್ರಭಾವವನ್ನೂ ಸ್ಪಷ್ಟಪಡಿಸುತ್ತದೆ.

ನವದೆಹಲಿ:
ಮಾರ್ನಿಂಗ್ ಕನ್ಸಲ್ಟ್ ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲನೇ ಸ್ಥಾನವನ್ನು ಪಡೆದಿದ್ದಾರೆ. ಶೇ. 68ರಷ್ಟು ಜನ ಮೋದಿಯವರ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಎನ್ನುತ್ತದೆ ಈ ಸಮೀಕ್ಷಾ ವರದಿ.
ಈ ಸಮೀಕ್ಷೆಯು ಮಾರ್ಚ್ 2026ರ ಮೊದಲ ವಾರದ ದತ್ತಾಂಶವನ್ನು ಆಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯ ರೇಟಿಂಗ್ ಕೇವಲ ಶೇ. 39 ರಷ್ಟಿದ್ದರೆ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಕೇವಲ ಶೇ. 24 ರಷ್ಟಿತ್ತು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಅವರಿಗೆ ಕೇವಲ ಶೇಕಡಾ 17 ರಷ್ಟು ರೇಟಿಂಗ್ ಸಿಕ್ಕಿತ್ತು, ಆದರೆ ಶೇ. 75 ರಷ್ಟು ಜನರು ಅವರ ಕೆಲಸವನ್ನು ಇಷ್ಟಪಡಲಿಲ್ಲ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರನ್ನು ತಲಾ ಶೇ. 62 ರಷ್ಟು ಅನುಮೋದನೆ ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಇರಿಸಿದೆ.
ಪ್ರಧಾನಿ ಮೋದಿ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಇದೇ ಮೊದಲಲ್ಲ. ಜುಲೈ 2025 ರ ವರದಿಯಲ್ಲಿ ಅವರು ಶೇ. 75 ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ನಾಯಕರಾಗಿ ಸ್ಥಾನ ಪಡೆದಿದ್ದಾರೆ. ಮೇ 2024 ರಲ್ಲಿ ಅವರ ಮೂರನೇ ಅವಧಿ ಪ್ರಾರಂಭವಾದಾಗಿನಿಂದ ಅವರ ಜನಪ್ರಿಯತೆ ಸ್ಥಿರವಾಗಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ. 26 ರಷ್ಟು ಜನರು ಮಾತ್ರ ಅವರನ್ನು ಒಪ್ಪುವುದಿಲ್ಲ, ಇದು ಇತರ ಜಾಗತಿಕ ನಾಯಕರ ಅಸಮ್ಮತಿ ರೇಟಿಂಗ್‌ಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಮೋದಿ ಸತತ ಪ್ರಧಾನಿ ಹುದ್ದೆಗಳಲ್ಲಿ ಇಂದಿರಾ ಗಾಂಧಿಯವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈಗ ಅವರು ಭಾರತದ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ. ಈ ಪ್ರತಿಷ್ಠಿತ ಪಟ್ಟಿಯಲ್ಲಿ, ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗಿಂತ ಹಿಂದುಳಿದಿದ್ದಾರೆ, ಇದು ಭಾರತೀಯ ರಾಜಕೀಯದಲ್ಲಿ ಅವರ ಬೆಳೆಯುತ್ತಿರುವ ಸ್ಥಾನಮಾನ ಮತ್ತು ಅವರ ಮೇಲಿನ ಅಚಲ ಸಾರ್ವಜನಿಕ ನಂಬಿಕೆಗೆ ಸಾಕ್ಷಿಯಾಗಿದೆ.
ಸೆಪ್ಟೆಂಬರ್ 2021ನಿಂದ ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನಲ್ಲಿ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. 2021ರಲ್ಲಿ ಶೇ. 70ರಷ್ಟು ರೇಟಿಂಗ್ ಅನ್ನು ಮೋದಿ ಪಡೆದಿದ್ದರು. 2022ರಲ್ಲಿ ಶೇ. 71 ರೇಟಿಂಗ್ ಅನ್ನು ಮೋದಿ ಪಡೆದಿದ್ದರು.
ಇದಾದ ನಂತರದ ವರ್ಷದಲ್ಲೂ (2023) ಪ್ರಧಾನಿ ಮೋದಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರು. ಮೂರು ಬಾರಿ ಅಂದರೆ ಏಪ್ರಿಲ್, ಸೆಪ್ಟಂಬರ್ ಮತ್ತು ಡಿಸೆಂಬರ್ ಮಾಸದಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲೂ ಮೋದಿ ಶೇ. 76 ರೇಟಿಂಗ್ ಅನ್ನು ಪಡೆದಿದ್ದರು. 2024ರ ಸಮೀಕ್ಷೆಯಲ್ಲಿ ಮೋದಿ ಅಪ್ರೂವಲ್ ರೇಟಿಂಗ್ ಶೇ. 78ಕ್ಕೆ ತಲುಪಿತ್ತು.
