ಆಶಾವಾದ, ಉತ್ತಮ ಗುರಿ ಹಾಗೂ ಗುರುಗೌರವಕ್ಕೆ ಕರೆ: ಎಂ.ಎಸ್. ಹೆಗಡೆ ಗುಣವಂತೆ

ಹೊನ್ನಾವರ ಜ.23 : ಆಶಾವಾದಿಗಳಾಗಿ, ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಿ, ಸಕಲ ಭಾಷಾಸಂಪನ್ನರಾಗಿ, ಗುರು ಹಿರಿಯರನ್ನು ಗೌರವಿಸಿ ಎಂದು ಪಠ್ಯಪುಸ್ತಕ ರಚನಾಕಾರ ಎಂ ಎಸ್ ಹೆಗಡೆ ಗುಣವಂತೆಯವರು ನುಡಿದರು. ಇವರು ಗುಣವಂತೆಯ ಕರಾವಳಿ ಪ್ರೌಢಶಾಲೆಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ ” ಸಮಾರಂಭದವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮವಾದ ಮಾತುಗಾರಿಕೆಯು ಜನರನ್ನು ಆಕರ್ಷಿಸುತ್ತದೆ, ಜನ್ಮ ನೀಡಿದ ತಂದೆ ತಾಯಿ, ವಿದ್ಯೆ ಕಲಿಸಿದ ಗುರು, ಜೀವನ ಪಾಠ ಮಾಡಿದ ಜನ್ಮ ಭೂಮಿಯನ್ನು ಮರೆಯಬೇಡಿ ಎಂದು ಹೆಗಡೆಯವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ “ಸಹಕಾರಿ ರತ್ನ”ಗಣಪಯ್ಯ ಗೌಡ ಮುಗುಳಿ ಯವರು ಮಾತನಾಡಿ ಉತ್ತಮವಾಗಿ ಓದಿ ಜಾಣರಾಗಿ ನಮ್ಮ ನಾಡಿಗೆ ಕೀರ್ತಿಯನ್ನು ತನ್ನಿ ಎಂದರು, ಎಂ ವಿ ಹೆಗಡೆ ಕೆರೆಮನೆ ಯವರು ಮಾತನಾಡಿ ಮಹಾನ್ ವ್ಯಕ್ತಿಗಳ ಆದರ್ಶವನ್ನು ಪಾಲಿಸಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದರು. ಶಿವಾನಂದ ಗೌಡ ಅಡಿಮನೆ, ಎಂ ಹೆಚ್ ನಾಯ್ಕ, ವಿ ಜಿ ಭಟ್ ಹಾಗೂ ಸುಜಾತ ಗೌಡ ಅತಿಥಿಗಳಾಗಿ ಆಗಮಿಸಿದ್ದರು. ಮಂಡಲ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಿತ್ರಾಕ್ಷಿ ಗೌಡ ರವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಮುಖ್ಯ ಶಿಕ್ಷಕ ವಿ ಎಚ್ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಲಿಂಗೋಜಿ ಎಸ್ ರವರು ವರದಿ ವಾಚಿಸಿದರು.ಜಿ ಎಸ್ ಗೌಡ ವಂದಿಸಿದರು, ಶ್ರೀಕಾಂತ ಪೂಜಾರಿಯವರು ನಿರೂಪಿಸಿದರು. ವಿದ್ಯಾರ್ಥಿಗಳು, ಪಾಲಕರು, ಊರ ನಾಗರಿಕರು ಸಡಗರ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.