ಭಟ್ಕಳ : ತಾಲೂಕಿನ ಹೆಬಳೆಯ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ನಡೆದ ಬೆಳ್ಳಿ ಮಹೋತ್ಸವದ ಅಂಗವಾಗಿ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜ ಸೇವಕ ಮಂಜು ಮುಟ್ಟಳ್ಳಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮೂಲತಃ ಮುಠ್ಠಳ್ಳಿ ಗ್ರಾಮದವರಾಗಿದ್ದು ಮಂಜಣ್ಣ ಎಂದೇ ಭಟ್ಕಳ ತಾಲೂಕಿನಲ್ಲಿ ಚಿರಪರಿಚಿತರು. ಸದಾ ಸಮಾಜ ಸೇವಕರಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ರಸ್ತೆ ಅಪಘಾತ , ಅನಾಹುತ, ಆಕಸ್ಮಿಕ ಘಟನೆಗಳು ನಡೆದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ , ರೈಲ್ವೆ ಹಳಿಯಲ್ಲಿ ಸಿಕ್ಕ ಶವ, ನೀರಿನಲ್ಲಿ ಮುಳುಗಿದ ಮೃತದೇಹ, ಅನಾಥ ಶವಗಳಿಗೆ ನಡೆಯುವ ಅಂತ್ಯಕ್ರೀಯೆಗಳಲ್ಲಿ ಮುಂಚೂಣಿಯಲ್ಲಿ ನಿಂತು ವ್ಯವಸ್ಥೆ ಕಲ್ಪಿಸಿ ಕೊಡುವಂತ ವ್ಯಕ್ತಿತ್ವ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳ ನೆರವಿನಿಂದ ದವಸ ದಾನ್ಯ ಪೂರೈಸಿ ಸಹಸ್ರಾರು ಜನರ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ವರ್ಷದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದೆ ಮ್ರತಪಟ್ಟ 4-5 ಮೃತದೇಹಗಳ ಅಂತ್ಯಕ್ರಿಯೆಮಾಡಿದ್ದಾರೆ. ಹಸಿದವರು, ಅನಾಥರು, ಬಡವರು,ಬುದ್ದಿಮಾಂದ್ಯರು, ವಿಧವೆಯರು, ಭಿಕ್ಷುಕರಿಗೆ ನೆರವು ನೀಡುವಂತಹುದು ಇವರ ದಿನ ನಿತ್ಯದ ಕಾರ್ಯವಾಗಿದೆ.
ತಮ್ಮ ಮರಣದ ನಂತರ ದೇಹದ ಅಂಗಾಂಗಳನ್ನು ಮಂಗಳೂರಿನ ಏ.ಜೆ ಆಸ್ಪತ್ರೆಯ ಸಂಶೋಧನ ಕೇಂದ್ರಕ್ಕೆ ಧಾನ ಮಾಡುವ ನಿರ್ಧಾರವನ್ನು ಇವರು ತೆಗೆದುಕೊಂಡಿದ್ದಾರೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಶ್ರೀಯುತರಿಗೆ ಸನ್ಮಾನ ಸಂದಿರುವುದು ಅರ್ಥಪೂರ್ಣವಾಗಿದೆ.
