ಹೊನ್ನಾವರ : ನಗರದ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡಾ. ಮನೋಜ್ ಎಂ. ಎನ್. ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ, ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿ ಇದ್ದರೆ ಕುಳಿತ ಸ್ಥಳದಿಂದಲೇ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ. ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದಾಗಿದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ವಯೋವೃದ್ಧರ ನಿತ್ಯ ಜೀವನದ ಕೆಲಸಕಾರ್ಯಗಳನ್ನು ಅವರೇ ನಿರ್ವಹಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಲಿದೆ ಎಂದರು.

ವೇದಿಕೆಯಲ್ಲಿ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಚಂದ್ರಶೇಖರ್ ಶೆಟ್ಟಿ ರೀಜನ್ ಚೇರ್ ಪರ್ಸನ್ ಎಮ್.ಜೆ.ಎಫ್ ರಾಜೇಶ್ ಸಾಳೇಹಿತ್ತಲ್, ಎಂ ಜೆ ಎಫ್ ಲಯನ್ ವಸಂತ ಪ್ರಭು, ಖಜಾಂಚಿ ಎಮ್.ಜೆ.ಎಫ್ ಲಯನ್ ಜನಾರ್ಧನ ನಾಯ್ಕ, ಡಾ. ಪ್ರಮೋದ ಫಾಯದೆ ಮತ್ತು ಲಯನ್ ರೇವಣಕರ್ ಆಸ್ಪತ್ರೆಯ ಬಳಗಂಡಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ. ಜೆ .ಎಫ್ ಲಯನ್ ಜೀವೋತ್ತಮ್ ನಾಯಕ್ ಸರ್ವರನ್ನು ಸ್ವಾಗತಿಸಿದರು, ಕಾರ್ಯದರ್ಶಿ ಎಂ ಜೆ ಎಫ್ ಲಯನ್ ಡಾ. ಎ. ವಿ ಶಾನಭಾಗ್ ಪ್ರಸ್ತಾವಿಕವಾಗಿ ಮಾತನಾಡಿದರು ಹಾಗೂ ಎಮ್.ಜೆ.ಎಫ್ ರಾಜೇಶ್ ಸಾಳೇಹಿತ್ತಲ್ ವಂದಿಸಿದರು.

ತಾಲೂಕಿನ ವಿವಿಧ ಭಾಗಗಳಿಂದ 75 ಕ್ಕೂ ಅಧಿಕ ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿ ತಪಾಸಣೆಗೆ ಒಳಗಾದರು. ಇವರಲ್ಲಿ 20 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಲಯನ್ಸ್ ಕ್ಲಬ್‌ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಹಕರಿಸಿದರು.
