ಹೊನ್ನಾವರ ಡಿ. 11: ಮಲೆನಾಡು ಕರಾವಳಿ ಸೀಮೆಯನ್ನು 54 ವರ್ಷ ಆಳಿದ ಸರ್ವಧರ್ಮ, ಜಾತಿಗಳನ್ನು ಚೆನ್ನಾಗಿ ನೋಡಿಕೊಂಡು ವ್ಯಾಪಾರ ವಹಿವಾಟುಗಳನ್ನು ಬೆಳೆಸಿದ ರಾಣಿ ಚೆನ್ನಭೈರಾದೇವಿ ಥೀಮ್ ಪಾರ್ಕ್‌ನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಾವು ರೆಡಿ ಇದ್ದೇವೆ, ಸರ್ಕಾರ ಮನಸ್ಸು ಮಾಡಿ ಬೇಗ ಭೂಮಿಯನ್ನು ಬಾಡಿಗೆಗೆ ನೀಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಮಾಧ್ಯಮಗಳಿಗೆ ಹೇಳಿದ್ದಾರೆ.

4 ವರ್ಷಗಳ ಹಿಂದೆ ಕೊವೀಡ್ ಕಾಲದಲ್ಲಿ ಗಜಾನನ ಶರ್ಮಾ ಅವರ ರಾಣಿ ಚೆನ್ನಭೈರಾದೇವಿ ಕಾದಂಬರಿ ಓದಿ ಸ್ಫೂರ್ತಿಗೊಂಡು ರಾಣಿಯ ನೆಲದಲ್ಲಿಯೇ ಥೀಮ್ ಪಾರ್ಕ್ ರಚಿಸಲು ತೀರ್ಮಾನ ಕೈಗೊಂಡು ರಾಣಿ ವಿದೇಶಿ ವ್ಯಾಪಾರ ನಡೆಸಿ ಕಾಳುಮೆಣಸಿನ ರಾಣಿ ಎಂದು ಪ್ರಸಿದ್ಧಿ ಪಡೆದ ಪರಿಸರದಲ್ಲಿ ಕಾಸರಕೋಡಿನಲ್ಲಿ ಇದನ್ನು ರಚಿಸಲು ತೀರ್ಮಾನಿಸಲಾಗಿತ್ತು. ಕೇಂದ್ರ ಸರ್ಕಾರ ತನ್ನ ಅಭ್ಯಂತರ ಇಲ್ಲ, ಎಲ್ಲ ರಾಜ್ಯ ಸರ್ಕಾರದ್ದು ಎಂದು ಹೇಳಿದ್ದೆ. ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳ ಟ್ರಸ್ಟ್ನಿಂದ ಮನವಿ ಸಲ್ಲಿಸಲಾಗಿದೆ. 2 ಎಕರೆ ಭೂಮಿಯಲ್ಲಿ ಪಾರ್ಕ್ ನಿರ್ಮಾಣಗೊಂಡು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಮಾಡಿ ಸ್ಥಳಿಯ ಧರ್ಮಸ್ಥಳ ಸಂಘದ ಮಹಿಳೆಯರಿಗೆ ಇದರ ನಿರ್ವಹಣೆಯನ್ನು ಕೊಡುವ ಚಿಂತನೆಯಿದೆ. ಸಚಿವ ಮಂಕಾಳ ವೈದ್ಯ ಬೇಗ ಭೂಮಿ ಬಿಡುಗಡೆ ಮಾಡಿಸಿಕೊಟ್ಟರೆ ಪಾರ್ಕ್ ಕೆಲಸ ಆರಂಭಿಸಲಾಗುವುದು ಎಂದು ಅವರು ಹೇಳಿದರು..
ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಚಂದ್ರಶೇಖರ ಗೌಡ ಅವರ ನಿವಾಸದಲ್ಲಿ ಪಾರ್ಕ್ ಸಲಹಾ ಸಮಿತಿಯ ಸಭೆ ಕರೆದಿದ್ದ ಹೆಗ್ಗಡೆಯವರು ನಕ್ಷೆ ಮತ್ತು ಅದರ ಚಲನಚಿತ್ರಗಳನ್ನು ಪರಿಶೀಲಿಸಿ ಸಲಹೆ ನೀಡಿದರು. ಸಚಿವ ಮಂಕಾಳ ವೈದ್ಯ, ಪತ್ರಕರ್ತ ಜಿ.ಯು. ಭಟ್, ಚಂದ್ರಶೇಖರ ಗೌಡ ಮತ್ತು ಇಂಜಿನೀಯರ್‌ಗಳು ಉಪಸ್ಥಿತರಿದ್ದರು. ಬೇಗ ಸ್ಥಳ ಕೊಡಿಸುವದಾಗಿ ಸಚಿವರು ಭರವಸೆ ನೀಡಿದ್ದಾರೆ.
