ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಮೂಡ್ಕಣಿ ಸಾರ್ವಜನಿಕ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಊರಿನ ಹಾಗೂ ಪರ ಊರಿನ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೀಪದ ಅಲಂಕಾರದಿಂದ ದೇವಳವು ಕಂಗೊಳಿಸಿದ್ದು, ಭಕ್ತರು ಭಕ್ತಿಭಾವದಿಂದ ದೇವರ ದರ್ಶನ ಪಡೆದರು. ಸಭೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುವ ಮೂಲಕ ಉತ್ಸವಕ್ಕೆ ಇನ್ನಷ್ಟು ಭಕ್ತಿ ಮೆರಗು ಸೇರ್ಪಟ್ಟಿತು.




