ವೆಂಕಟಾಪುರ ಹೊಳೆಯ ಹೆಗ್ಗಲ್ ಸಮೀಪ ಪ್ರತ್ಯಕ್ಷಗೊಂಡ ಮೊಸಳೆ.! ಆತಂಕಕೊಂಡ ಸ್ಥಳೀಯರು.!

ಭಟ್ಕಳ: ವೆಂಕಟಾಪುರ ಹೊಳೆಯ ಹೆಗ್ಗಲ್ ಸಮೀಪ ಹೊಳೆಯ ನಡುವೆ ಇರುವ ಮಣ್ಣಿನ ದಿಬ್ಬದಲ್ಲಿ ಕಳೆದ 10 ದಿನಗಳಿಂದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಊರಿನವರಲ್ಲಿ ಆತಂಕ ಸೃಷ್ಟಿಸಿದೆ.

ವೆಂಕಟಾಪುರ ನದಿಯಲ್ಲಿ ಇದು ಎರಡನೆ ಬಾರಿಗೆ ಕಾಣಿಸಿಕೊಂಡಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನೀಲಕಂಠ ಭಾಗದಲ್ಲಿ ಪ್ರತ್ಯಕ್ಷಗೊಂಡ ಮೊಸಳೆ ಈಗ ಕಳೆದ 10 ದಿನಗಳಿಂದ ಹೆಗ್ಗಲ್ ಭಾಗದಲ್ಲಿ ಪ್ರತ್ಯಕಗೊಂಡಿದೆ. ಭಟ್ಕಳದಲ್ಲಿ ಸುರಿದ ಭಾರಿ ಮಳೆಗೆ ರಭಸದಲ್ಲಿ ಬರುವ ನೀರಿನಲ್ಲಿ ಕಡವಿನಕಟ್ಟೆ ಡ್ಯಾಂನಿಂದ ಕೆಳಕ್ಕೆ ಬಂದಿದೆಯೋ ಅಥವಾ ಇಲ್ಲಿಯೇ ಹಲವಾರು ವರ್ಷಗಳಿಂದ ಇದೆಯೋ ಎನ್ನುವ ಜಿಜ್ಞಾಸೆಗೆ ಕಾರಣವಾಗಿದೆ.

ಸುಮಾರು 5-6 ಅಡಿ ಉದ್ದವಿದ್ದ ಮೊಸಳೆಯಾಗಿದ್ದು ಇದೇ ಪ್ರದೇಶದಲ್ಲಿ ಸದಾ ಜನರು ನೀರಿಗಿಳಿಯುವುದು, ಈಜುವುದು ಮಾಡುತ್ತಿರುವುದರಿಂದ ಮೊಸಳೆ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪ್ರತಿ ವರ್ಷ ಈ ಭಾಗದ ಸುತ್ತ ಮುತ್ತ  ಮೊಸಳೆ ಪ್ರತ್ಯಕ್ಷ ವಾಗುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಮೊಸಳೆ ಪ್ರತ್ಯೇಕವಾಗಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ