ಬಿಗ್ಬಾಸ್ ಮನೆಯಲ್ಲಿ ಈ ವಾರ ಯಾವುದೇ ಟಾಸ್ಕ್ ಇರದಿದ್ದರೂ, ಸ್ಪರ್ಧಿಗಳಿಗೆ ಮನೆಯವರಿಂದ ಪತ್ರಗಳು ಬಂದಿವೆ. ಆದರೆ ಬಿಗ್ಬಾಸ್ ನಿಯಮದ ಪ್ರಕಾರ, ಮನೆಯ ಎಲ್ಲ ಸದಸ್ಯರ ಒಮ್ಮತ ಇದ್ದಾಗ ಮಾತ್ರ ಆ ಪತ್ರಗಳನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಇಲ್ಲದಿದ್ದರೆ, ಆ ಪತ್ರಗಳನ್ನು ಹರಿದು ಹಾಕಬೇಕು. ಈ ವೇಳೆ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಅನೇಕರು ರಕ್ಷಿತಾಗೆ ಪತ್ರ ಸಿಗಬೇಕು ಎಂದು ಒಪ್ಪಿಕೊಂಡರೂ, ಅಶ್ವಿನಿ ಮತ್ತು ಧ್ರುವಂತ್ ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಇಬ್ಬರೂ ರಕ್ಷಿತಾಗೆ ಪತ್ರ ನೀಡಬಾರದೆಂದು ಹಠ ಹಿಡಿದ ಕಾರಣ, ಅಂತಿಮವಾಗಿ ಆ ಪತ್ರ ರಕ್ಷಿತಾಳ ಕೈಗೆ ತಲುಪಲಿಲ್ಲ. ಪತ್ರ ಸಿಗದೆ ಬೇಸರಗೊಂಡ ರಕ್ಷಿತಾ ಕಣ್ಣೀರಿಟ್ಟರು.




