ಜಮೀರ್‌ ಇಲಾಖೆಯಲ್ಲಿ ಗೋಲ್ಮಾಲ್‌, ಬಿಆರ್‌ ಪಾಟೀಲ್‌ ದೂರು ನೀಡಿದ್ರೆ ಕ್ರಮ -ಪರಮೇಶ್ವರ್

ಬೆಂಗಳೂರು: ವಸತಿ ಇಲಾಖೆಯಲ್ಲಿ ಯಾರು ಲಂಚ ಕೇಳುತ್ತಿದ್ದಾರೆ ಎಂಬುದರ ಬಗ್ಗೆ ಬಿ.ಆರ್. ಪಾಟೀಲ್ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಆರ್ ಪಾಟೀಲರು ಯಾವ ಅರ್ಥದಲ್ಲಿ ಹೇಳಿದ್ದಾರೆ ಮತ್ತು ಭ್ರಷ್ಟಚಾರ ಆರೋಪವನ್ನ ನೇರವಾಗಿ ಹೇಳಿಲ್ಲ. ಯಾರು ಲಂಚ ಕೇಳ್ತಿದಾರೆ ಅಂತಾ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಇದೇ ವೇಳೆ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯಗಳಿಗೆ ಮನೆ ಇಲ್ಲವೆಂದಾಗ ಕೊಡಬೇಕಾಗುತ್ತದೆ. ಇದರಲ್ಲಿ ಧರ್ಮಾಧರಿತ ಪ್ರಶ್ನೇಯೇ ಬರುವುದಿಲ್ಲ. ನಿರ್ಗತಿಕರಿಗೆ ಮನೆಗಳನ್ನು ನೀಡಬೇಕಾಗುತ್ತದೆ‌ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಇದರಲ್ಲಿ 15-20% ಎಂಬ ಪ್ರಶ್ನೆ ಉದ್ಭವ ಆಗುವುದಿಲ್ಲ. ಯಾರಿಗೆ ಮನೆ ಇಲ್ಲ ಅವರಿಗೆ ಮನೆ ನೀಡಬೇಕಾಗುತ್ತದೆ. ಇಲ್ಲಿ ಧರ್ಮಧಾರಿತ ಪ್ರಶ್ನೆಯೇ ಬರುವುದಿಲ್ಲ. ಈವರೆಗೂ ಪರಿಶಿಷ್ಟರರಿಗೆ ಕಡಿಮೆ ನಿವೇಶನ ಇತ್ತು. ಪರಿಶಿಷ್ಟರಿಗೆ ನಿವೇಶನ ಕೊಟ್ಟ ನಂತರ ಅವರ ಸಂಖ್ಯೆ ಕಡಿಮೆ ಆಯ್ತು. ಮುಂದೆ ಅದೇ ರೀತಿ ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪರಂ ಸಮರ್ಥನೆ ಮಾಡಿದರು.