ಹೊಳೆಗದ್ದೆ ಸುಂಕ ವಸೂಲಾತಿ ಸಿಬ್ಬಂದಿ ವರ್ಗದವರಿಂದ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಹೊಳೆಗದ್ದೆ ಸುಂಕ ವಸೂಲಾತಿ ಸಿಬ್ಬಂದಿ ವರ್ಗದವರು ಕನ್ನಡ ರಾಜ್ಯೋತ್ಸವವನ್ನು ಭಕ್ತಿಭಾವದಿಂದ ಹಾಗೂ ಉತ್ಸಾಹಭರಿತವಾಗಿ ಆಚರಿಸಿದರು. ಅಜಿತ್ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯ ಮಹತ್ವವನ್ನು ಕೊಂಡಾಡಿದರು. ರಾಜ್ಯೋತ್ಸವದ ಸಂಭ್ರಮದಿಂದ ಸಂಪೂರ್ಣ ಕಚೇರಿ ಪ್ರಾಂಗಣವೇ ಹಬ್ಬದ ವಾತಾವರಣವನ್ನು ಪಡೆದುಕೊಂಡಿತ್ತು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕರನ್ನು ಸನ್ಮಾನಿಸಿದರು. ಹೊಳೆಗದ್ದೆ ಸುಂಕ ವಸೂಲಾತಿ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗಿಯಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.