ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರು ಆಯ್ಕೆ

ಭಟ್ಕಳ: ಶಾಸಕರ ಮಾದರಿ ಶಾಲೆ ಸೋನಾರಾಕೇರಿಯಲ್ಲಿ ನಡೆದ ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತ ಆಸರಕೇರಿ ಭಟ್ಕಳ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನೂತನ
ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಪಾಂಡುರಂಗ ದುರ್ಗಪ್ಪ ನಾಯ್ಕ 567 ಮತ, ಭವಾನಿಶಂಕರ ಈಶ್ವರ ನಾಯ್ಕ524 ಮತ, ಕೇಶವ ಸಂಕಪ್ಪ ನಾಯ್ಕ 512 ಮತ, ಗಂಗಾಧರ ಮಾಸ್ತಪ್ಪ ನಾಯ್ಕ 486 ಮತ , ಸುರೇಶ ತಿಮ್ಮಪ್ಪ ನಾಯ್ಕ 462 ಮತ , ಶಾಂತರಾಮ ಸುಬ್ಬಯ್ಯ ನಾಯ್ಕ 446 ಮತ, ಮಹೇಶ ಜಟ್ಟಪ್ಪ ನಾಯ್ಕ 445 ಗಳಿಸುವುದರ ಮೂಲಕ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಅ ಕ್ಷೇತ್ರದಲ್ಲಿ ಹೊನ್ನಪ್ಪ ಜಟ್ಟಪ್ಪ ನಾಯ್ಕ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಲಕ್ಷ್ಮಣ ಲಿಂಗ ಹಳ್ಳೆರ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಮಾದೇವ ನಾರಾಯಣಗೊಂಡ ಹಾಗೂ ಮಹಿಳಾ ಮೀಸಲಾತಿಯಲ್ಲಿ ನೇತ್ರಾ ರಮೇಶ ನಾಯ್ಕ ಮತ್ತು ಲಕ್ಷ್ಮೀ ಮಾದೇವ ನಾಯ್ಕ ಜಯಶಾಲಿಗಳಾಗಿದ್ದರೆ.

ಚುನಾವಣೆಯಲ್ಲಿ ಈ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುವುದರ ಮೂಲಕ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.