ಅಂಕೋಲಾ: ಪಾಸ್ಟ್ ಟ್ಯಾಗ್ ಇಲ್ಲದೆ ಬಂದ ಸರಕಾರಿ ಸಾರಿಗೆ ಬಸ್ಸೊಂದು ಟೋಲ್ ಗೇಟ್ ನಲ್ಲಿ ಸಿಲುಕಿ ಪ್ರಯಾಣಿಕರು ಪಜೀತಿ ಅನುಭವಿಸಿದ ಘಟನೆ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ನಡೆದಿದೆ.
ಗದಗದಿಂದ ಕಾರವಾರಕ್ಕೆ ಬರಬೇಕಾಗಿದ್ದ ಗದಗ ಡಿಪೋ ಬಸ್ ಇದಾಗಿದ್ದು ಪಾಸ್ಟ್ ಟ್ಯಾಗ್ ಇಲ್ಲದೆ ಬಸ್ಸನ್ನು ನಿಲ್ಲಿಸಿಡಲಾಯಿತು. ಕಾರವಾರಕ್ಕೆ ತೆರಳಬೇಕಾಗಿದ್ದ ಪ್ರಯಾಣಿಕರು ಮಾರ್ಗ ಮಧ್ಯದಲ್ಲೆ ಪರದಾಟ ಅನುಭವಿಸಬೇಕಾಯಿತು.
ಇನ್ನು ಗದಗ ಡಿಪೋ ಮ್ಯಾನೇಜರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ರೆ ಡಿಪೋ ಮ್ಯಾನೇಜರ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ಚಾಲಕ ನಿರ್ವಾಹಕರು ಆರೋಪ ಮಾಡಿದ್ದಾರೆ. ಎರಡನೇ ಬಾರಿಗೆ ಪೋನಾಯಿಸಿದ್ರೆ ಡಿಪೋ ಮ್ಯಾನೇಜರ್ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ.
ಮೇಲಾಧಿಕಾರಿಗಳ ಪರವಾನಿಗೆ ಇಲ್ಲದೆ ಕೈಯಿಂದ ಟೋಲ್ ಕಟ್ಟಲು ನಿರ್ವಾಹಕ ಹಿಂದೇಟು ಹಾಕಿದ್ದಾನೆ. ಬಳಿಕ ಪ್ರಯಾಣಿಕರನ್ನ ಬೇರೆ ಬಸ್ ನಲ್ಲಿ ಪ್ರಯಾಣಿಕರನ್ನು ಕಾರವಾರಕ್ಕೆ ಕಳುಹಿಸಲಾಗಿದೆ.