ಹೊನ್ನಾವರ ಇಕೋ ಬೀಚ್ ಕೆಎ-47 ವಾಹನಕ್ಕೆ ಸುಂಕ ವಸೂಲಾತಿ, ಕಿರುಕುಳ ಆರೋಪ

ಉತ್ತರ ಕನ್ನಡ : ಮುರುಡೇಶ್ವರ ಟ್ಯಾಕ್ಸಿ ಚಾಲಕರು ಹೊನ್ನಾವರದ ಇಕೋ ಬೀಚ್‌ನಲ್ಲಿ ಕೆಎ-47 ವಾಹನಕ್ಕೆ ಸುಂಕ ವಸೂಲಾತಿ ಮತ್ತು ಸಿಬ್ಬಂದಿಗಳಿಂದ ಕಿರುಕುಳ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಟ್ಯಾಕ್ಸಿ ಚಾಲಕರ ಮಾಲಕರ ಸ್ನೇಹಿತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗ್ರಾಹಕರನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಸುರಕ್ಷಿತವಾಗಿ ಕೊಂಡೊಯ್ಯುವಂತೆ ಬಾಡಿಗೆ ವಾಹನ ಚಾಲಕರಿಗೆ ಸೂಚನೆ ನೀಡಿದ್ದು, ಸಿಬ್ಬಂದಿಗಳಿಗೆ ಕೂಡ ಸರಿಯಾದ ನಿರ್ವಹಣೆ ಪಾಲಿಸಲು ಎಚ್ಚರಿಕೆ ನೀಡಲಾಗಿದೆ.