ಸಿ.ಎಂ ಗೆ ಮನವಿ ಸಲ್ಲಿಸಲು ಬಂದ ವೇಳೆ ಕುಸಿದು ಬಿದ್ದ ಮಹಿಳೆ.!

ಹುಬ್ಬಳ್ಳಿ: ಸಿ ಎಂ ಗೆ ಮನವಿ ಸಲ್ಲಿಸಲು ಬಂದ ವೇಳೆ ಮಹಿಳೆಯೊಬ್ಬಳು ಕುಸಿದು ಬಿದ್ದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಗಾಂಧಿ ನಗರ ನಿವಾಸಿ ಭಾರತಿ ಕುಸಿದು ಬಿದ್ದ ಮಹಿಳೆ. ಈಕೆ ಮಗನನ್ನ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಸಿ ಎಂ ಬಳಿ ಮಹಿಳೆ ಅಳಲು ತೋಡಿಕೊಳ್ಳಲು ಬಂದಿದ್ದಳು. ಆಗ ಏಕಾಏಕಿ ಕುಸಿದುಬಿದ್ದಿದ್ದಾಳೆ.

ಕುಸಿದು ಬಿದ್ದ ಮಹಿಳೆಗೆ ಪೊಲೀಸ್ ಸಿಬ್ಬಂದಿ ನೀರು ಕುಡಿಸಿ ತಕ್ಷಣವೇ ಉಪಚರಿಸಿದ್ದಾರೆ. ನಂತರ ಪೊಲೀಸ್ ವಾಹನದಲ್ಲಿಯೇ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ.