ಹೊನ್ನಾವರ ಸೇ 20 : ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನದ ಅಂಗವಾಗಿ ಕಾಸರಕೋಡ್‌ನ ಟೊಂಕಾ ಬೀಚ್‌ನಲ್ಲಿ ಸ್ವಚ್ಚಾತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತ ಸರಕಾರದ ಸಹಕಾರದೊಂದಿಗೆ ಸ್ನೇಹಕುಂಜ ಟ್ರಸ್ಟ್ , ಕಾಸರಕೋಡ , ಶ್ರೀ ಜೈನ ಓಟಕೇಶ್ವರ ಯುವಕ ಸಮಿತಿ ಟೊಂಕಾ, ಮತ್ತು ಗ್ರಾಮ ಪಂಚಾಯಿತಿ ಕಾಸರಕೋಡ ರವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಹಲವು ಮೀನುಗಾರ ಸಂಗಟಣೆಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಟೊಂಕಾ ಕಡಲ ತೀರವನ್ನು ಪ್ಲಾಸ್ಟಿಕ ಮುಕ್ತಗೊಳಿಸಿದರು.

500 ಮೀಟರ ಕಡಲ ತೀರದಿಂದ ಸ್ವಚ್ಚತಾ ಕಾರ್ಯದಿಂದ 570 kg ಕಸ ಸಂಗ್ರಹಿಸಿದರು ಅದರಲ್ಲಿ 86 ಕೇಜಿ ವಿವಿಧ ಬಗೆಯ ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿದರು ಗ್ರಾಮ ಪಂಚಾಯಿತ ಕಾಸರಕೋಡ ಕಸ ವಿಲೇವಾರಿ ಮಾಡಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮಂಕಾಳಿ ಪ್ರಕಾಶ ಹರಿಜನ್ ವಹಿಸಿದ್ದರು. ಕಾರ್ಯಕ್ರಮವನ್ನು ಡಾ. ವಿಜಯ ಲಕ್ಷ್ಮಿ ನಾಯ್ಕ , ಎಂ.ಪಿ.ಇ ಶಿಕ್ಷಣ ಸಂಸ್ಥೆ ಉದ್ಘಾಟಿಸಿದ್ರು. ಮುಖ್ಯ ವಕ್ತಾರರಾಗಿ ಖ್ಯಾತ ಪರಿಸರ ವಕೀಲೆ ಶ್ರೀಜಾ ಚಕ್ರವರ್ತಿ ಸಮುದ್ರ ಪ್ಲಾಸ್ಟಿಕ ದಿಂದ ಆಗುವ ಪರಿಣಾಮ ಗಳು ಮತ್ತು ಕಾನೂನುಗಳ ಬಗ್ಗೆ ತಿಳಿಸಿದರು.
ಮೀನುಗಾರ ಮುಖಂಡರಾದ ರಾಜೇಶ , ಗಣಪತಿ, ರಾಜು, ಜಗಧೀಶ, ಬಾಸ್ಕರ , ಹಾಗೂ NCC ಆರ್ಮಿ, MPE, ಅಜಿಂ ಪ್ರೇಮಜ ವಿದ್ಯಾರ್ಥಿಗಳು ಕಾರ್ಯಕ್ರಮನ್ನು ಡಾ ಪ್ರಕಾಶ ಸಂಯೋಜಿಸಿದರು.

