
ಖಾಸಗಿ ರಂಗದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾದ ,ಕಳೆದ ಎಂಟು ದಶಕಗಳಿಂದ ಗ್ರಾಹಕರಿಗೆ ನಿರಂತರವಾಗಿ ಅತ್ಯುತ್ತಮ ಸೇವೆಗಳನ್ನು ಒದಗಿಸಿಕೊಡುತ್ತಾ ಬಂದಿರುವ ವಿಶ್ವಾಸಾರ್ಹ ಬ್ಯಾಂಕು ‘ಕರ್ನಾಟಕ ಬ್ಯಾಂಕು’ ಈ ಬ್ಯಾಂಕಿನ ಪದಾಧಿಕಾರಿಗಳಾದ ಉಡುಪಿ ರೀಜನಲ್ ಹೆಡ್ ಮತ್ತು ಅಸಿಸ್ಟೆಂಟ ಜನರಲ್ ಮ್ಯಾನೇಜರ್ ಶ್ರೀ ವಾದಿರಾಜ ಕೆ. ,ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಮತ್ತು ಕುಮಟಾ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ರಂಜಿತ್ ಶೆಟ್ಟಿ ಹಾಗೇ ಕರ್ನಾಟಕ ಬ್ಯಾಂಕ್ ಕುಮಟಾ ಶಾಖೆಯ ಮ್ಯಾನೇಜರ್ ಚಿಂತಾಮಣಿ ಪಂಡಿತ್ , ಧಾರೇಶ್ವರ ಶಾಖೆಯ ಮ್ಯಾನೇಜರ್ ಆದ ಶ್ರೀ ಶ್ರೀಧರ್ ಹೆಬ್ಬಾರ ಅವರು ಕೆನರಾ ಎಕ್ಸಲೆನ್ಸ್ ಕಾಲೇಜು ಗೋರೆಗೆ ಇಂದು ಭೇಟಿ ಕೊಟ್ಟು ಕಾಲೇಜಿನ ಆವರಣವನ್ನ ವೀಕ್ಷಿಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ ಹೆಗಡೆಯವರೊಂದಿಗೆ ಮಾತನಾಡಿ ಸಂಸ್ಥೆ ನಿರಂತರವಾಗಿ ಪ್ರಗತಿಪಥದಲ್ಲಿ ಸಾಗುತ್ತಿರಲಿ ಎಂದು ಶುಭ ಹಾರೈಸಿದರು.

