ಸ್ವಚ್ಛತೆ ಕಾಪಾಡಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನಿರುದ್ಧ್ ಮನವಿ

ನಟ ಅನಿರುದ್ಧ್ ಅವರು ಸಾಮಾಜಿಕ ಜವಾಬ್ದಾರಿಯ ಮನೋಭಾವ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಗಾಗ ಸ್ವಚ್ಛತೆ ಹಾಗೂ ಸಾರ್ವಜನಿಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ವಿಶೇಷವಾಗಿ ಬೆಂಗಳೂರಿನ ಸ್ವಚ್ಛತೆಯ ಬಗ್ಗೆ ಸ್ಥಳೀಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿರುತ್ತಾರೆ. ಎಲ್ಲೆಡೆ ಕಸದ ರಾಶಿ ಕಂಡಾಗ ಅದರ ವಿಡಿಯೋ ಹಂಚಿ, ಬದಲಾವಣೆಗೆ ಕರೆ ನೀಡುವುದು ಅವರ ಅಭ್ಯಾಸ.

ಇತ್ತೀಚೆಗೆ ಲಾಲ್‌ಬಾಗ್ ಎದುರಿನ ಸ್ವಚ್ಛತೆಯ ವಿಷಯವಾಗಿ ಅವರು ವಿಡಿಯೋ ಪೋಸ್ಟ್ ಮಾಡಿ, “ಸ್ಥಳೀಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ, ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ನಾವು ಎಲ್ಲರೂ ಸೇರಿ ಕೆಲಸ ಮಾಡಿದರೆ, ನಮ್ಮ ನಗರವೂ ಬೇರೆ ದೇಶಗಳಿಗೆ ಮಾದರಿಯಾಗಬಹುದು” ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ.