ದಸರಾ ಆರಂಭದಲ್ಲೇ ಹೂವಿನ ಬೆಲೆ ಕುಸಿತ: ಬಾಡಿದ ರೈತರ ಬದುಕು!

ಗದಗಿನ ರೈತರು ನಾಡಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಆದರೆ ಬೆಲೆ ಕುಸಿತದಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಸರ್ಕಾರದಿಂದ ಸಹಾಯಕ್ಕೆ ಒತ್ತಾಯಿಸುತ್ತಿದ್ದಾರೆ. ಅತಿವೃಷ್ಟಿಯಿಂದ ಹೂವುಗಳ ಗುಣಮಟ್ಟ ಕುಂದಿದ್ದು, ರಫ್ತು ಕಡಿಮೆಯಾಗಿದೆ.

ಗದಗಿನ ರೈತರು ಭರ್ಜರಿ ಹೂವು ಬೆಳೆದು ಹೂವಿನಂಥ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಹಾಗೇ ರೈತರ ತೋಟಗಳಲ್ಲಿ ಕಲರ್ ಕಲರ್ ಹೂವುಗಳು ಕಂಗೊಳಿಸುತ್ತಿದ್ದವು. ನಾಳೆನಾಡ ಹಬ್ಬವೂ ಆರಂಭ ಶುರುವಾಗಿದೆ. ಹೀಗಾಗಿ ಭರ್ಜರಿ ದರ ಸಿಗುತ್ತೆ ಅಂತ ಕನಸು ಹೊತ್ತು ಮಾರುಕಟ್ಟೆಗೆ ಆಗಮಿಸಿದ್ದರು. ಆದರೆ ದರ ಕುಸಿತದಿಂದ ಗೋಳಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರದಿದ್ದರೆ ಸಾವಿನ ದಾರಿಯೇ ಗತಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇವಂತಿ, ಗುಲಾಬಿ, ಸುಗಂಧಿ ರಾಜಾ, ಚೆಂಡು ಹೂವು ಹೀಗೆ ಕಲರ್ ಕಲರ್ ಹೂವುಗಳ ರಾಶಿ. ಅಬ್ಬಾ ಎಂಥಾ ಸೂಪರ್ ಹೂವುಗಳ ಅಂತ ಗ್ರಾಹಕರು ಮುಗಿಬಿದ್ದರೆ, ರೈತರ ಮುಖ ಮಾತ್ರ ಸಪ್ಪೆಯಾಗಿತ್ತು. ನಾಡಹಬ್ಬಕ್ಕೆ ನಮ್ಮ ಹೂವುಗಳಿಗೆ ಭರ್ಜರಿ ದರ ಸಿಗುತ್ತೆ ಅಂತ ನಸುಕಿನಲ್ಲೇ ಕಲರ್​​ಫುಲ್​ ಹೂವುಗಳೊಂದಿಗೆ ರೈತರು ಮಾರುಕಟ್ಟೆಗೆ ಆಗಮಿಸಿದರೆ, ಹೂವಿನ ಬೆಲೆ ಪಾತಾಳಕ್ಕೆ ಕುಸಿದ ದರ ಕೇಳಿ ಕಂಗಾಲಾದರು.