ಸಹಕಾರಿ ಕ್ಷೇತ್ರದ ಧುರೀಣ ಪಿ.ಎಸ್‌.ಭಟ್‌ ನಿಧನ

ಸಹಕಾರಿ ಕ್ಷೇತ್ರದ ಧುರೀಣರು ಮಾದರಿ ಕೃಷಿಕರಾಗಿದ್ದ ಪಿ.ಎಸ್‌.ಭಟ್‌ ಉಪ್ಪೋಣಿ (69) ಬುಧವಾರ ಹೃದಘಾತದಿಂದ ನಿಧನರಾಗಿದ್ದಾರೆ.
ಸಾವಯುವ ಕೃಷಿಕರಾಗಿದ್ದ ಹೊನ್ನಾವರ ತಾಲೂಕಿನ ಉಪ್ಪೋಣಿಯ ಪಿಎಸ್‌ ಭಟ್‌ ಉಪ್ಪೋಣಿ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾಗಿ ಮಾರ್ಕೆಟಿಂಗ್‌ ಸೊಸೈಟಿ ಮತ್ತು ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಿವಿಧ ಹೋರಾಟದ ಮೂಲಕ ಚಿರಪರಿಚಿತರಾಗಿದ್ದ ಪಿಎಸ್‌ ಭಟ್‌ ಅವರ ನಿಧನಕ್ಕೆ ತಾಲೂಕಿನ ಹಲವರು ಸಂತಾಪ ಸೂಚಿಸಿದ್ದಾರೆ.