
ಹೊನ್ನಾವರ ಸೆ.09 : ಅಂಕೋಲಾದ ಹಿಮಾಲಯ ಕಾಲೇಜಿನಲ್ಲಿ ನಡೆದ 2025-26 ನೆ ಶೈಕ್ಷಣಿಕ ವರ್ಷದ ಪದವಿಪೂರ್ವ ಕಾಲೇಜಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಗೋರೆಯ ವಿದ್ಯಾರ್ಥಿನಿ ಭೂಮಿಕಾ ಹೆಗಡೆ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ ಹೆಗಡೆಯವರು , ಆಡಳಿತ ಮಂಡಳಿಯ ವಿಶ್ವಸ್ಥರಾದ ಡಿ .ಎನ್ . ಭಟ್ಟ , ಪ್ರಾಚಾರ್ಯರಾದ ನಾಗರಾಜ್ ಹೆಗಡೆ, ಆಡಳಿತ ಅಧಿಕಾರಿಗಳಾದ ಶಶಾಂಕ್ ಶಾಸ್ತ್ರಿ, ಕ್ರೀಡಾ ಸಂಚಾಲಕರಾದ ಗಣಪತಿ ಭಟ್ಟ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.


