
ಮೇಷ ರಾಶಿ :
ಅಸಹಾಯಕತೆಯನ್ನು ಹೇಳಿದರೆ ನಿಮ್ಮ ಘನತೆಗೆ ದಕ್ಕೆ ಎಂಬ ಆಲೋಚನೆ ಬರುವುದು. ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಅಸ್ತಿಯ ಹಂಚಿಕೆಯ ವಿಚಾರದಲ್ಲಿ ಚರ್ಚೆಗಳು ಆಗಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಬರಬಹುದು. ಸ್ವ ಉದ್ಯೋಗದ ಓಡಾಟ. ವ್ಯಾಪಾರವು ಅಭಿವೃದ್ಧಿಯಾಗಿ ಒಂದೊಂದೇ ಹಂತವನ್ನು ಏರುವಿರಿ. ಕುಟುಂಬ ನಿರಾತಂಕವಾಗಿ ಜೀವನ ನಡೆಸುವುದು. ಅನಾರೋಗ್ಯವು ಊಹೆಗಿಂತಲೂ ಸುಧರಣೆ ಕಾಣಿಸುವುದು.
ವೃಷಭ ರಾಶಿ :
ಮೇಲಾಧಿಕಾರಿಗಳ ಜೊತೆ ಅಂತರ ಅವಶ್ಯವಾಗಿರಲಿ. ಯಾವುದನ್ನು ನಿಮ್ಮದೆಂದುಕೊಂಡಿದ್ದೀರೋ ಅದು ಉಳಿಯದು. ನೀವು ಕುಟುಂಬ ಮತ್ತು ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಬಾಂಧವ್ಯ ಬೆಳೆಯುವುದು. ಬಂಧುಗಳ ಭೇಟಿಯಿಂದ ಚಿತ್ತವು ಉತ್ಸಾಹದಿಂದ ಇರವುದು. ಮಾಡಬೇಕಾದ ಕೆಲಸಗಳನ್ನು ವೇಗವಾಗಿ, ಎಚ್ಚರಿಕೆಯಿಂದ ಮಾಡಿ. ಸಹೋದರನ ಅನಿರೀಕ್ಷಿತ ಸಹಾಯವು ಸಂತಸವನ್ನು ತರುವುದು. ಉಪಕಾರಕ್ಕೆ ಪ್ರತ್ಯುಪಕಾರದ ಮನೋಭಾವ ಇರಲಿ.
ಮಿಥುನ ರಾಶಿ :
ಇಂದು ನೀವು ಮಾಡುವ ತಪ್ಪು ಸರಿಮಾಡಿಕೊಳ್ಳುವಂತಹದ್ದೇ ಆಗಿದೆ. ನಿಮ್ಮ ಮಾತನ್ನು ಯಾರೂ ಕೇಳರು ಎಂದು ಬೇಸರವಾಗುವುದು. ನೀವು ಇಂದು ಯಾರ ಸಹಾಯವನ್ನೂ ಪಡೆಯಲು ಇಚ್ಛಿಸುವುದಿಲ್ಲ. ಆಲಸ್ಯದಿಂದ ಕಛೇರಿಯ ಕೆಲಸವನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ. ಒಳ್ಳೆಯ ಅಭ್ಯಾಸಗಳು ನಿಮ್ಮನ್ನು ಆರೋಗ್ಯವಾಗಿ ಇಡುವುದು. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತನಾಡುವಿರಿ. ಸಾಮಾಜಿಕ ಕೆಲಸಗಳಿಂದ ಗೌರವಪ್ರಾಪ್ತಿಯಾಗಲಿದೆ.
ಕರ್ಕಾಟಕ ರಾಶಿ :
ಸುಮ್ಮನೇ ಇರುವವರನ್ನು ಮಾತನಾಡಿಸಿ, ಅವರಿಂದ ನಿಂದನೆಯನ್ನೂ ಪಡೆಯಬೇಕಾಗುವುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ಯಾವ ಸತ್ಯವನ್ನೂ ನೀವು ನಂಬುವ ಸ್ಥಿತಿಯಲ್ಲಿ ಇರುವುದಿಲ್ಲ. ವೈಯಕ್ತಿಕ ಕಾರಣದಿಂದ ನಿಮ್ಮ ಉದ್ಯೋಗವನ್ನು ಬದಲಿಸಬೇಕಾಗುವುದು. ಪಡೆದ ಸಾಲವನ್ನು ತೀರಿಸುವಿರಿ. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ಹೂಡಿಕೆ ಮಾಡಿದ ಹಣವನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸಹೋದ್ಯೋಗಿಗಳ ಹಾದಿಯನ್ನು ಸೇರಿ ಮೇಲಧಿಕಾರಿಗಳಿಂದ ನಿಂದನೆ ಸಿಗುವುದು. ಭಯವು ಅವಕಾಶಗಳಿಂದ ವಂಚಿನೆಯಾಗುವಂತೆ ಮಾಡುವುದು. ಇಂದು ದುಸ್ಸಾಹಸಕ್ಕೆ ತೊಡಗುವುದುಬೇಡ. ಪ್ರಯಾಣವನ್ನು ಅನಾರೋಗ್ಯದ ಕಾರಣ ಕಡಿಮೆ ಮಾಡುವಿರಿ. ಏಕಾಂತವನ್ನು ಇಷ್ಟಪಟ್ಟರು ಇರಲಾಗದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಳೆದುಹೋದುದನ್ನು ಮರಳಿ ಪಡೆಯುವುದು ಕಷ್ಟ.
ಸಿಂಹ ರಾಶಿ :
ನಿಮ್ಮ ಕನಸಿನ ಹುದ್ದೆಗೆ ಹೋಗುವ ಅವಕಾಶ ಲಭ್ಯವಿದ್ದು ಅದಕ್ಕೆ ಬೇಕಾದ ಪೂರಕ ಪ್ರಯತ್ನವನ್ನು ಮಾಡುವಿರಿ. ಪಾಲುದಾರಿಕೆಯ ಭಿನ್ನಾಭಿಪ್ರಾಯವನ್ನು ನೀವೇ ಮೊದಲು ಮಾತನಾಡಿ ಸರಿ ಮಾಡಿಕೊಂಡರೆ ಮುಂದುವರಿಯುವುದು. ನಿಮ್ಮ ಉಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸಬಹುದು. ಸ್ನೇಹಿತರ ಮಾತುಗಳು ನಿಮಗೆ ಉಪಯೋಗಬಹುದು. ಉದ್ಯಮವನ್ನು ನೀವು ಹೆಚ್ಚಿಸುವ ಯೋಚನೆ ಇರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಅಳುಕು ಇರುವುದು. ನಿಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಕೆಲಸವನ್ನು ಹಂಚುವಿರಿ. ನೀವು ಇಂದು ಹೋರಾಟದ ಮನೋಭಾವವನ್ನು ಇಟ್ಟಕೊಳ್ಳುವಿರಿ. ಸೌಂದರ್ಯ ವರ್ಧನೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಾರ್ವಜನಿಕ ಸ್ಥಳದಲ್ಲಿ ಆಡಿದ ಮಾತು ಪ್ರತಿರೋಧಕ್ಕೆ ಕಾರಣವಾಗುವುದು. ಇನ್ನೊಬ್ಬರ ಮೇಲೆ ಆಕರ್ಷಣೆ ಉಂಟಾಗಬಹುದು. ಸಮಾಜಸೇವಕರ ಭೇಟಿಯಾಗಿ ನಿಮ್ಮ ಸಮಸ್ಯೆಗೆ ಸಮಾಧಾನ ತಂದುಕೊಳ್ಳುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲೂ ಚಿಂತಿಸುವಿರಿ. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಮಾಡಿ ಕೊಡಬಹುದು.
ಕನ್ಯಾ ರಾಶಿ :
ಅಂತರ್ಜಾಲದ ವ್ಯವಹಾರ ಅಧಿಕವಾಗಿದ್ದು, ಹಣದ ಖರ್ಚೂ ಹೆಚ್ಚಾಗಲಿದೆ. ನಿಮ್ಮ ದೌರ್ಬಲ್ಯವು ಗೌರವವನ್ನು ಹರಣಮಾಡಬಹುದು. ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ನಿರ್ಧಾರವನ್ನು ಮಾಡುವಿರಿ. ಯಾವುದೇ ದೊಡ್ಡ ಮೊತ್ತದ ಖರೀದಿಯನ್ನು ಮಾಡುವಾಗ ಅವಶ್ಯಕತೆ ಅನಿವಾರ್ಯತೆಗಳ ಬಗ್ಗೆ ಗಮನವಿರಲಿ. ಮಕ್ಕಳು ನಿಮಗೆ ಖರ್ಚಿನ ದಾರಿಯಾಗಿ ಕಾಣಿಸುವುದು. ನಿಮ್ಮ ಅನಿರೀಕ್ಷಿತ ಲಾಭದಿಂದ ಸಂತೋಷವಾದರೂ ನಿಮಗೆ ಸಂದೇಹಗಳು ಇರಬಹುದು. ತಂದೆಯ ಬಳಿ ವಿವಾಹದ ಪ್ರಸ್ತಾಪವನ್ನು ಮಾಡುವಿರಿ. ನಿಮ್ಮ ವರ್ತನೆಯು ತೋರಿಕೆಯಂತೆ ಕಾಣಬಹುದು. ಉದ್ಯಮಿಗಳ ಭೇಟಿಯಾಗುವ ಸಾಧ್ಯತೆ ಇದೆ.
ತುಲಾ ರಾಶಿ :
ನಿಮ್ಮ ಅನಿರೀಕ್ಷಿತ ಪದವಿಯ ತ್ಯಾಗವು ಅನೇಕರಲ್ಲಿ ಸಂಚಲನ ತರಲಿದೆ. ಇಂದು ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ. ಪುಣ್ಯಸ್ಥಳಕ್ಕೆ ಅನಿರೀಕ್ಷಿತ ಭೇಟಿ ಹಾಗೂ ಸಮಾಧಾನ ಸಿಗಲಿದೆ. ಸಾಲವನ್ನು ಮರುಪಾವತಿ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ನಿಮ್ಮವರ ಬಗ್ಗೆ ತಿಳಿಯುವ ಕುತೂಹಲ. ಅದೃಷ್ಟವನ್ನು ನಂಬಿ ಕೆಲಸವನ್ನು ಆರಂಭಿಸುವುದಕ್ಕಿಂತ ಸಾಮರ್ಥ್ಯವನ್ನು ಕಂಡುಕೊಂಡು ಮಾಡುವುದು ಒಳ್ಳೆಯದು. ರಾಜಕೀಯದಲ್ಲಿ ಪರಿವರ್ತನೆ ಆಗಲಿದ್ದು, ನಿಮಗೆ ಗೊಂದಲ ಹೆಚ್ಚಾಗುವುದು. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇದು ನಿಮ್ಮನ್ನು ಉದ್ವೇಗಕ್ಕೆ ಒಳಗಾಗಿಸುವುದು.
ವೃಶ್ಚಿಕ ರಾಶಿ :
ಯಾತನೆಯಿಂದ ಮುಕ್ತಿ ಪಡೆಯಲು ಶ್ರಮ. ಅನೇಕರ ಸಹಕಾರದಿಂದ ನಿಶ್ಚಿಂತೆ. ಇಂದು ನಿಮಗೆ ಸಿಗುವ ಪ್ರೀತಿ ಹಂಚಿಕೆಯಾಗಿ ನಿಮಗೆ ಕಷ್ಟವಾಗುವುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ನಿಮಗೆ ವಹಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ವೇತನ ಅಧಿಕ ಮಾಡಿಕೊಳ್ಳಲು ಹಲವು ದಾರಿಗಳಲ್ಲಿ ಪರಿಶ್ರಮ ವಹಿಸುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ನಿಮಗೆ ಅನ್ನಿಸಿದ್ದನ್ನು ಕೂಡಲೇ ಹೇಳಿದರೂ ಅನ್ಯ ಪರಿಣಾಮ ಬೀರದು. ನಿಮ್ಮ ನಡತೆಯ ಪರೀಕ್ಷೆಯೂ ನಡೆಯಲಿದೆ. ವೃಥಾ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಕಾಸು ಹಾಳು ತಲೆಯೂ ಬೋಳು ಎನ್ನುವಂತೆ ಆಗಬಹುದು. ಮನೆಗೆ ಬೇಕಾದ ವಸ್ತುಗಳನ್ನು ನೀವು ಪಡೆಯುವಿರಿ. ಅಹಂಕಾರವನ್ನು ಎಲ್ಲರದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ನಿಲುವನ್ನು ಸಂಗಾತಿಯು ಪ್ರೋತ್ಸಾಹಿಸಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ವೃದ್ಧಿ.
ಧನು ರಾಶಿ :
ನಿಮ್ಮ ವಿರುದ್ಧ ಇರುವವರನ್ನು ಅರಿತುಕೊಳ್ಳುವಿರಿ. ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿ ಸಿಗದು. ಒಳ್ಳೆಯ ಸೇವೆಯಿಂದ ಯಶಸ್ಸು ಸಿಗುವುದು. ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಬೆರೆಯುವ ಒಳ್ಳೆಯ ಸ್ವಭಾವದಿಂದ ಅಪವಾದ ಬರಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಎಡವಟ್ಟು ಮಾಡಿಕೊಳ್ಳದೇ ಏನನ್ನೂ ಮಾಡಲು ಬರದು ಎಂದು ಎಲ್ಲರಿಗೂ ಗೊತ್ತಾಗುವುದು. ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರಬಹುದು. ಭೂಮಿಯ ಉತ್ಪನ್ನದಿಂದ ಲಾಭವಾಗಕಿದೆ. ನಿಮಗೆ ಇಂದು ಒಂದುಕಡೆ ಕುಳಿತು ಕೆಲಸ ಮಾಡಲು ಆಗದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು.
ಮಕರ ರಾಶಿ :
ಕೋರ್ಟ್ ವಿಚಾರಕ್ಕೆ ಗೊಂದಲ ಉಂಟಾಗುವುದು. ಇಂದು ನೀವು ಸಂಗಾತಿಯ ಮೇಲೆ ಕೋಪವನ್ನು ತೀರಿಸಿಕೊಂಡರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆ ಬಾರದು. ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮಗೆ ಯಾರು ಬೆಂಬಲ ಕೊಡುತ್ತಾರೆ ಎನ್ನುವದೇ ಗೊತ್ತಾಗದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ ನಿಮಗೆ ಗೊಂದಲವು ಬರಬಹುದು. ಎಲ್ಲರನ್ನೂ ನಿಮ್ಮ ವಶದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸುತ್ತೇನೆ ಎಂಬುದು ಕಷ್ಟವಾದೀತು. ಮನೆಯಬಕೆಲಸವನ್ನು ಬೇಗನೆ ಮುಕ್ತಾಗೊಳಿಸುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದವರೇ ಹೊರಗೆ ಹೋಗಲು ಇಚ್ಛಿಸುವಿರಿ. ಯಾರೂ ನಿಮ್ಮ ಆಜ್ಞೆಯನ್ನು ಮೀರದಂತೆ ನೋಡಿಕಳ್ಳಬಹುದು. ನಿದ್ರೆಯನ್ನು ಕಡಿಮೆ ಮಾಡುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು.
ಕುಂಭ ರಾಶಿ :
ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ಬರಲಿದ್ದು, ಕೈ ಜೋಡಿಸಿ. ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಕಾರ್ಯವು ಸಿದ್ಧಿಯಾಗುವ ತನಕವಾದರೂ ಮೌನವಾಗಿರುವುದು ಉತ್ತಮವೆಂದು ಹಿರಿಯರಿಂದ ಉಪದೇಶ ಸಿಗುವುದು..
ಮೀನ ರಾಶಿ :
ನಿಮ್ಮ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡಬಹುದು. ಇಂದು ನೀವು ಯಾರಾದರೂ ಏನನ್ನಾದರೂ ಕೇಳಿದರೆ ಮಾತ್ರ ಹೇಳಬೇಕೇ ವಿನಹ ನಿಮಗೆ ಗೊತ್ತಿದೆ ಎಂದು ಮೂಗುತೂರಿಸಲು ಹೋಗಿ, ಮೂಗು ಜಜ್ಜಿಕೊಳ್ಳಬೇಕಾದೀತು. ಇಂದು ಕುಟುಂಬದಲ್ಲಿ ನಿಮ್ಮ ಯಶಸ್ಸಿಗೆ ಎಲ್ಲರೂ ಖುಷಿಪಡುವರು. ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುತ್ತದೆ ಎಂದು ಗೊತ್ತಾಗುವ ಮೊದಲೇ ನಿಮ್ಮನ್ನು ದಾರಿ ತಪ್ಪಿಸಿ ಅನ್ಯ ಮಾರ್ಗವೇ ಇಲ್ಲದಂತೆ ಆಗುವುದು. ಉತ್ಪನ್ನಗಳ ವಿತರಣೆಯನ್ನು ವೇಗವಾಗಿ ಮಾಡುವಿರಿ. ಕೆಲವು ಸಮಯದ ಅಧ್ಯಾತ್ಮದ ಚಿಂತನೆಯನ್ನು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು.
