ಹೊನ್ನಾವರ, ಜುಲೈ 15 : ಹೊನ್ನಾವರ ತಾಲೂಕಿನ ಖರ್ವಾ ಗ್ರಾ.ಪಂ ವ್ಯಾಪ್ತಿಯ ಯಲಗುಪ್ಪಾ ಬಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗಿದೆ. ಹೊನ್ನಾವರ ತಾಲೂಕಿನ ಖರ್ವಾ ಗ್ರಾ.ಪಂ ವ್ಯಾಪ್ತಿಯ ಯಲಗುಪ್ಪಾ ಬಳಿ ಧನ್ವಂತರಿ ಕ್ರಾಸ್‌ನಲ್ಲಿ ಭಾರಿ ಗುಡ್ಡ ಕುಸಿತವಾಗಿದೆ. ಗುಡ್ಡದ ಜೊತೆಗೆ ಮರಗಳು ಕೂಡ ಧರೆಗುರುಳಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, 150ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ..
ಗುಡ್ಡ ಕುಸಿತದ ಭೀತಿಯಿಲ್ಲದೇ ತೆರಳಿದ್ದ ಗ್ಯಾಸ್ ಸಿಲಿಂಡಿರ್ ತುಂಬಿದ್ದ ಲಾರಿಯೊಂದು ಮಣ್ಣಿನಲ್ಲೇ ಸಿಲುಕಿಕೊಂಡಿದೆ. ಹೀಗಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸುಮಾರು 150ಕ್ಕೂ ಹೆಚ್ಚು ವಾಹನಗಳು ಆ ಕಡೆ ಹೋಗಲೂ ಆಗದೇ.. ಈ ಕಡೆ ಬರಲೂ ಆಗದೇ ಪರದಾಟ ನಡೆಸುತ್ತಿದ್ದಾರೆ..
ಇನ್ನೂ ಕ್ಷಣಕ್ಷಣಕ್ಕೂ ಕುಸಿಯುತ್ತಿರುವ ಗುಡ್ಡದಿಂದಾಗಿ ವಾಹನ ಸವಾರರ ಆತಂಕ ಹೆಚ್ಚಾಗುವಂತೆ ಮಾಡಿದೆ…