ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಜೊತೆ ಟ್ರಂಪ್ ಒಳ್ಳೆಯ ವೈಯಕ್ತಿಕ ಸಂಬಂಧ ಹೊಂದಿದ್ದರು
ಆದರೆ ಈಗ ಆ ಬಾಂಧವ್ಯ ಇಲ್ಲ ಎಂದು ಜಾನ್ ಬೋಲ್ಟನ್ ಅಭಿಪ್ರಾಯ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ಬಹಿರಂಗ.

ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ ಕೆಟ್ಟ ಹಂತದ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಮತ್ತು ಭಾರತದ ಮೇಲಿನ ನಿರಂತರ ಟೀಕೆಗಳಿಂದ ಈ ಬಿಕ್ಕಟ್ಟು ಎದುರಾಗಿದೆ.
ಟ್ರಂಪ್ ಅಂತರರಾಷ್ಟ್ರೀಯ ಸಂಬಂಧಗಳನ್ನು ವೈಯಕ್ತಿಕ ಬಾಂಧವ್ಯದ ನೋಟದಿಂದ ನೋಡುತ್ತಾರೆ
ಪುಟಿನ್ ಜೊತೆ ಆತ್ಮೀಯತೆ ಇದ್ದಾಗ ರಷ್ಯಾ–ಅಮೆರಿಕ ಸಂಬಂಧ ಉತ್ತಮವಾಗಿತ್ತು
ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ಬೋಲ್ಟನ್ ತಿಳಿಸಿದ್ದಾರೆ.
ಈ ಮೊದಲ ಟ್ರಂಪ್ ಆಡಳಿತದಲ್ಲಿ ಎನ್‌ಎಸ್‌ಎ ಆಗಿ ಬೋಲ್ಟನ್ ಸೇವೆ ಸಲ್ಲಿಸಿದ್ದರು. ಈಗ ಟ್ರಂಪ್ ಅವರನ್ನೇ ನೇರವಾಗಿ ಟೀಕಿಸುತ್ತಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಇಲ್ಲವಾಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ. ಉದಾಹರಣೆಗೆ (ಯುಕೆ ಪ್ರಧಾನಿ) ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಟ್ರಂಪ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಭಾರತದ ಸಂಬಂಧವನ್ನು ಯುಎಸ್ ದಶಕಗಳ ಹಿಂದಕ್ಕೆ ತಳ್ಳಿದೆ. ಈ ನಡೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಚೀನಾ ಬಿಂಬಿಸಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.
