ಹೊನ್ನಾವರದ ಅಳ್ಳಂಕಿ ನೆರೆ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಲಯನ್ಸ್ ಪದಾಧಿಕಾರಿಗಳ ಭೇಟಿ

ಉತ್ತರ ಕನ್ನಡ : ಹೊನ್ನಾವರದ ಅಳ್ಳಂಕಿಯ ಗಾಬಿತ್ ಕೇರಿಯ ನೆರೆ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶುಕ್ರವಾರ ಹೊನ್ನಾವರದ ಲಯನ್ಸ್ ಪದಾಧಿಕಾರಿಗಳು ಭೇಟಿ ನೀಡಿದರು. ಶರಾವತಿ ನದಿಯ ನೆರೆ ಬಾಧಿತರಿಗಾಗಿ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಜೀವೋತ್ತಮ ನಾಯ್ಕ ಮಾತನಾಡಿ – “ನೆರೆ, ಅನಾರೋಗ್ಯ ಸೇರಿದಂತೆ ಜನ ಸಂಕಷ್ಟದಲ್ಲಿರುವಾಗ ಲಯನ್ಸ್ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ನೆರೆ ಮುಂದುವರಿದರೆ ಮತ್ತಷ್ಟು ಧಾನ್ಯ ವಿತರಣೆ ಮಾಡುವೆವು” ಎಂದು ಹೇಳಿದರು.

ಎಸ್.ಜೆ. ಬೈರನ್ ಮಾತನಾಡಿ – “ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಮನವಿಯ ಮೇರೆಗೆ, ಶರಾವತಿ ತೀರದ ಎಲ್ಲೆಡೆ ಲಯನ್ಸ್ ಸಹಾಯ ಮಾಡಲು ಬದ್ಧವಾಗಿದೆ. ಅಳ್ಳಂಕಿಯ ಸರ್ಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಟಿ.ವಿ ನೀಡುವ ಯೋಜನೆಯೂ ಇದೆ” ಎಂದರು.

ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ಲಯನ್ಸ್ ಸೇವೆಯನ್ನು ಮೆಚ್ಚಿದರು. ಕಾರ್ಯಕ್ರಮದಲ್ಲಿ ರಾಜೇಶ್ ಸಾಲೇಹಿತ್ತಲ, ಡಾ. ಎ.ವಿ.ಶ್ಯಾನಭಾಗ, ವಿನೋದ ನಾಯ್ಕ ಮಾವಿನಹೊಳೆ, ಗ್ರಾಮಾಧ್ಯಕ್ಷೆ ಮೇರಿ ಡಾಯಸ್, ಅಶೋಕ ಮಹಾಲೆ, ಎನ್.ಜಿ. ಭಟ್ಟ, ಸಂತೋಷ ನಾಯ್ಕ, ಮಂಗಲಾ ಹಳ್ಳೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸರಳಗಿ ,ಮಾವಿನಹೊಳೆ, ಅಳ್ಳಂಕಿ ಶರಾವತಿ ನದಿಯ ನೆರೆ ಬಾಧಿತರಿಗಾಗಿ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿದರು