ಹುಬ್ಬಳ್ಳಿ–ಜೋಧಪುರ್ ನೇರ ರೈಲು ಆರಂಭ: ಟಿಕೆಟ್ ಬುಕಿಂಗ್ ಆರಂಭ, ಸಮಯಪಟ್ಟಿ ಬಿಡುಗಡೆ

ನವದೆಹಲಿ, ಆ.29: ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಕರ್ನಾಟಕಕ್ಕೆ ರೈಲ್ವೆ ಇಲಾಖೆ ವಿಶೇಷ ಉಡುಗೊರೆ ನೀಡಿದೆ. ಕೇಂದ್ರ ಸಚಿವ cಅವರ ಒತ್ತಾಸೆಯ ಮೇರೆಗೆ ಹುಬ್ಬಳ್ಳಿ–ಜೋಧಪುರ್ ನೇರ ರೈಲು ಸಂಚಾರವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

ಸೆಪ್ಟೆಂಬರ್ 28ರಿಂದ ಆರಂಭವಾಗುವ ಈ ರೈಲು ಪ್ರತಿ ಭಾನುವಾರ ಸಂಚರಿಸಲಿದೆ. ಹುಬ್ಬಳ್ಳಿ–ಜೋಧಪುರ್ (ರೈಲು ಸಂಖ್ಯೆ 07359) ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮುಂದಿನ ದಿನ ಬೆಳಗ್ಗೆ 5.30ಕ್ಕೆ ಜೋಧಪುರ್ ತಲುಪಲಿದೆ. ಪ್ರಸ್ತುತ ವಿಶೇಷ ರೈಲು ರೂಪದಲ್ಲಿ ಸಂಚಾರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಿತ್ಯ ರೈಲು ಸೇವೆಯಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಈ ರೈಲು ಸೇವೆಗಾಗಿ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 28, ಅಕ್ಟೋಬರ್ 5, 12, 19 ಮತ್ತು ನವೆಂಬರ್ 2ರ ಪ್ರಯಾಣಗಳಿಗೆ ಮುಂಗಡ ಕಾಯ್ದಿರಿಸುವಿಕೆ ಲಭ್ಯವಿದೆ. ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಜನತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದ ರೈಲು ಸೇವೆ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸತತ ಪ್ರಯತ್ನದಿಂದ ಸಾಕಾರವಾಗಿದೆ.