ಶಾಸಕ ಪ್ರಕಾಶ ಕೋಳಿವಾಡರ ಆಪ್ತನ ಮನೆಯಲ್ಲಿ ಕನ್ನ

ಹಾವೇರಿ: ಶಾಸಕ ಪ್ರಕಾಶ ಕೋಳಿವಾಡ ಅವರ ಆಪ್ತಸಹಾಯಕನ ಮನೆಗೆ ಕಳ್ಳರು ಕನ್ನ ಹಾಕಿದ್ದು, 21 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಕಂಠಿಬಿರೇಶ್ವರ ನಗರದಲ್ಲಿ ನಡೆದಿದೆ.

ಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕರಾಗಿ ಕೆಲಸ ಮಾಡ್ತಿದ್ದ ಶ್ರೀನಿವಾಸ ಹಳ್ಳಳಿ ಅವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಟ್ರಿಜೋರಿಯಲ್ಲಿಟ್ಟಿದ್ದ ಮಾಂಗಲ್ಯಸರ ಮತ್ತು ಕಿವಿ ಒಲೆ ಸೇರಿದಂತೆ ನಾಲ್ಕುವರೆ ಲಕ್ಷ ರೂ. ನಗದನ್ನು ದೋಚಿದ್ದಾರೆ.

ಶ್ರೀನಿವಾಸ ಅವರು ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಣೇಬೆನ್ನೂರು ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.