ಶಿಕ್ಷಣ ಪ್ರೇಮಿ, ಸಾಧಕ ಪಿ ಬಿ ಶಾನ್‌ಭಾಗ್ ನಿಧನ

ಹೊನ್ನಾವರ,ಜುಲೈ 19 : ವಿಶ್ವ ದರ್ಜೆಯ ಇಂಜಿನಿಯರ್, ಶಿಕ್ಷಣ ಪ್ರೇಮಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದ ಶ್ರೀ ಪದ್ಮನಾಭ ಶಾನಭಾಗ್ ಅವರು 88ನೇ ವಯಸ್ಸಿನಲ್ಲಿ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಅವರು ಮೂಲತಃ ಹೊನ್ನಾವರದ ಕಾಸರಗೋಡಿನವರು.

ಪದ್ಮನಾಭ ಶಾನಭಾಗ್ ತಮ್ಮ ಬಾಲ್ಯದಲ್ಲಿ ತೀವ್ರ ಬಡತನದಲ್ಲಿ ಬೆಳೆದವರಾಗಿದ್ದರು. ಆದರೆ, ಅದೇ ಬಡತನ ಅವರನ್ನು ಬೆದರಿಸದೇ, ತಮ್ಮ ಬುದ್ಧಿವಂತಿಕೆ, ಪ್ರತಿಭೆಯಿಂದ ಮುಂಬೈ ಪ್ರಾಂತದ ಆಕರ್ಷಣೆಗೀಡಾಗಿ ರಾಜ್ಯಪಾಲರ ಗಮನ ಸೆಳೆದರು. ನಂತರ ಅವರ ಸಹಾಯದಿಂದ ಇಂಜಿನಿಯರಿಂಗ್ ಶಿಕ್ಷಣ ಪಡೆದ ಅವರು, ತಾವು ಪಡೆದ ಶಿಕ್ಷಣದಿಂದ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೆಸರು ಗಳಿಸಿದರು.

ಆದರೆ, ಅವರು ಯಶಸ್ಸನ್ನು ಕೇವಲ ವೈಯಕ್ತಿಕ ಸ್ಥಿತಿಗತಿಗಳ ಸುಧಾರಣೆಗೆ ಮಾತ್ರ ಬಳಸಿಲ್ಲ. ಅವರು ಜೀವನದ ಕೊನೆಯ ಹಂತದವರೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅನೇಕ ಶಾಲೆಗಳಿಗೆ ಆಧುನಿಕ ಶಿಕ್ಷಣ ಪರಿಕರಗಳನ್ನು, ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ. ಅವರ ಅಗಲಿಕೆಗೆ ಕುಟುಂಬಸ್ಥರು, ಮತ್ತು ಬಂಧು ಮಿತ್ರರು ಸಂತಾಪ ವ್ಯಕ್ತ ಪಡಿಸಿದ್ದಾರೆ.