ಬೀದರ್‌ನ ಗುರುದ್ವಾರಕ್ಕೆ ಬಾಂಬ್ ಬೆದರಿಕೆ: ಕಿಡಿಗೇಡಿಗಳ ಹುಸಿ ಇ-ಮೇಲ್ ಮೆಸೆಜ್ ಆತಂಕ

ಬೀದರ್, ಜುಲೈ 19:
ರಾಜ್ಯಾದ್ಯಂತ ಬಾಂಬ್ ಬೆದರಿಕೆಗಳ ಹೆಸರು ಹೇಳಿ ಶಾಂತತೆಯದೊಂದಿಗೆ ಆಟವಾಡುತ್ತಿರುವ ಕಿಡಿಗೇಡಿಗಳು ಈಗ ಬೀದರ್‌ನಿಗೂ ಕಾಲಿಟ್ಟಿದ್ದಾರೆ. ನಗರದ ಪ್ರಸಿದ್ಧ ಗುರುದ್ವಾರ ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂಬ ಬೆದರಿಕೆ ಇ-ಮೇಲ್ ಒಂದನ್ನು ಕಿಡಿಗೇಡಿಗಳು ಕಳಿಸಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಕಾನೂನು ಸಲಹೆಗಾರನ ಹೆಸರಿನಲ್ಲಿ ಇ-ಮೇಲ್:

ವಕೀಲ ಅಲೀಂ ಅಲ್ ಬುಕಾರಿ ಎಂಬ ಹೆಸರಿನಲ್ಲಿ ಈ ಇ-ಮೇಲ್ ಕಳುಹಿಸಲಾಗಿದ್ದು, ಗುರುದ್ವಾರ ಆಡಳಿತ ಮಂಡಳಿಗೆ ಬಂದ ಈ ಸಂದೇಶವನ್ನು ಕೂಡಲೇ ಪೊಲೀಸ್ ಇಲಾಖೆ ಜೊತೆ ಹಂಚಲಾಗಿದೆ. ಮಾಹಿತಿ ಪಡೆದ ಬೆನ್ನಲ್ಲೇ ಎಸ್‌ಪಿ, ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ತಂಡ ಸಹ ಗುರುದ್ವಾರವನ್ನು ತಪಾಸಣೆ ನಡೆಸಿತು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.

ಇ-ಮೇಲ್‌ನಲ್ಲಿ ಏನೆಲ್ಲಾ ಉಲ್ಲೇಖ?

ಬಾಂಬ್ ಬೆದರಿಕೆ ಇ-ಮೇಲ್‌ನಲ್ಲಿ ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್ ಹಾಗೂ ಉದಯನಿಧಿ ಅವರ ಹೆಸರುಗಳ ಉಲ್ಲೇಖವಿದೆ. “ಉದಯನಿಧಿ ಸಂಬಂಧಿತ ವಿವಾದಗಳನ್ನು ಮರೆಮಾಡಲು ಈ ಸ್ಫೋಟ ನಡೆಯಲಿದೆ” ಎಂಬ ಸಂದೇಶವಿದೆ. ಪಾಕಿಸ್ತಾನದ ಐಎಸ್ಐ ಸಂಚು ಎಂಬ ಸ್ಫಷ್ಟನೆ ಕೂಡ ನೀಡಲಾಗಿದೆ. ಸ್ಫೋಟದ ರಿಮೋಟ್ ಆಗಿ ಚಾಲನೆ ಭಕ್ತರ ಮೊಬೈಲ್ ಸಿಗ್ನಲ್ ಮೂಲಕ ನಡೆಯಲಿದೆ ಎಂಬ ಉಲ್ಲೇಖವೂ ಇದೆ.

ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್ ಬೆದರಿಕೆ: ಆತಂಕದಲ್ಲಿ ಪೋಷಕರು ಮತ್ತು ಮಕ್ಕಳು

ಈಘಟನೆಗೆ ಮುನ್ನ, ಜುಲೈ 18ರಂದು ಬೆಂಗಳೂರಿನ ಸುಮಾರು 40 ಶಾಲೆಗಳಿಗೆ roadkill333@atomicmail.io ಎಂಬ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶವೊಂದು ಬಂದಿತ್ತು. ಇಮೇಲ್‌ನಲ್ಲಿ, “ಬ್ಲ್ಯಾಕ್ ಪ್ಲಾಸ್ಟಿಕ್ ಚೀಲಗಳಲ್ಲಿ ಬಾಂಬ್ ಇಡಲಾಗಿದೆ. ಸ್ಫೋಟದ ದೃಶ್ಯವನ್ನ ನೋಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ,” ಎಂಬ ಘೋರ ಸಂದೇಶವಿತ್ತು.

ಶಾಲಾ ಆಡಳಿತ ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ರು. ಬಾಂಬ್ ಸ್ಕ್ವಾಡ್ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೇ ಬಂದು ಎಲ್ಲಾ ಬ್ಲಾಕ್‌ಗಳನ್ನು ಪರಿಶೀಲಿಸಿದರು. ಆದರೆ ಎಲ್ಲವೂ ಸುಳ್ಳು ಮೆಸೆಜ್ ಆಗಿದ್ದು, ಯಾವ ಬಾಂಬ್‌ನ ಸಂಧಾನವೂ ಪತ್ತೆಯಾಗಿಲ್ಲ.

ಸಿಎಂ ಪ್ರತಿಕ್ರಿಯೆ: ಹೊಸ ಕಾನೂನು ಜಾರಿಯ ಭರವಸೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಹುಸಿ ಬೆದರಿಕೆಗಳನ್ನು ತಡೆಯಲು ನೂತನ ಕಾನೂನು ಜಾರಿಗೆ ತರಲಾಗುವುದು ಎಂದಿದ್ದಾರೆ. ಸುಳ್ಳು ಮಾಹಿತಿ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.