ಬಿಸಿಸಿಐ ಮನವಿಗೆ ಸೊಪ್ಪು ಹಾಕದ ಎಸಿಸಿ: ಏಷ್ಯಾಕಪ್ ಬಹಿಷ್ಕರಿಸುವ ಸಾಧ್ಯತೆ

ಬೆಂಗಳೂರು, ಜುಲೈ 19 – (ಎಸಿಸಿ) ವಿರುದ್ಧ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಭಾರತ ಈ ಬಾರಿಯ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಭಾರತದ ಮನವಿಗೆ ಎಸಿಸಿ ಸ್ಪಂದಿಸದ ಕಾರಣ ಈ ಪರಿಸ್ಥಿತಿ ಉಂಟಾಗಿದೆ.

ಢಾಕಾದಲ್ಲಿ ಸಭೆ – ಬಿಸಿಸಿಐಗೆ ಆಕ್ಷೇಪ

ಈ ವರ್ಷ ಎಸಿಸಿಯ ವಾರ್ಷಿಕ ಮಹಾಸಭೆಯನ್ನು ಬಾಂಗ್ಲಾದೇಶದ ಢಾಕಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ತಣಿವು ಇನ್ನೂ ನಿವಾರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಸಭೆಯ ಸ್ಥಳವನ್ನು ಬದಲಾಯಿಸಲು ಮನವಿ ಸಲ್ಲಿಸಿತ್ತು. ಆದರೆ, ಈ ಕುರಿತು ಎಸಿಸಿಯಿಂದ ಯಾವುದೇ ಸ್ಪಷ್ಟತೆ ಅಥವಾ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಬಿಸಿಸಿಐ ಮೂಲಗಳ ಪ್ರಕಾರ, ಅವರು ಎಸಿಸಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಹೇಳಿದ್ದು, ಢಾಕಾದಲ್ಲಿ ಸಭೆ ನಡೆಯಿದರೆ ಸಂಪೂರ್ಣವಾಗಿ ಬಹಿಷ್ಕರಿಸುವ ನಿರ್ಧಾರ ತಗೊಂಡಿದ್ದಾರೆ.

ಇತರೆ ರಾಷ್ಟ್ರಗಳೂ ಅಸಮಾಧಾನದಲ್ಲಿ

ಈ ಸಭೆಯ ಆಯೋಜನೆಯ ವಿರುದ್ಧ ಶ್ರಿಲಂಕಾ, ಒಮಾನ್ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳೂ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಅವರೂ ಸಹ ಢಾಕಾದಲ್ಲಿ ನಡೆಯುವ ಸಭೆಗೆ ಗೈರಾಗುವ ನಿರೀಕ್ಷೆಯಿದೆ. ಇದರರ್ಥ, ಸಭೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ Cricket Board ಗಳು ಮಾತ್ರ ಭಾಗವಹಿಸುವ ಸಾಧ್ಯತೆ ಇದೆ.

ಬಹಿಷ್ಕಾರದ ಪರಿಣಾಮ – ಏಷ್ಯಾಕಪ್‌ ಭವಿಷ್ಯ ಅಪಾಯದಲ್ಲಿ

ಬಿಸಿಸಿಐ ಯಾವುದೇ ನಿರ್ಧಾರಕ್ಕೂ ಸಹಮತ ನೀಡದಿರುವುದರಿಂದ, ಡಾಕಾದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಅಮಾನ್ಯವೆಂದು ಪರಿಗಣಿಸುವ ಎಚ್ಚರಿಕೆಯನ್ನು ನೀಡಿದೆ. ವಿಶೇಷವಾಗಿ ಟೀಮ್ ಇಂಡಿಯಾ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಬೇಕಾದರೆ, ಸಭೆಯ ಸ್ಥಳ ಬದಲಾವಣೆ ಅತೀ ಅಗತ್ಯ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಮುಂಬರುವ ಏಷ್ಯಾಕಪ್ ನಡೆಯುತ್ತದೆಯೋ ಇಲ್ಲವೋ ಎಂಬುದೇ ಈಗ ಸವಾಲಿನ ವಿಷಯವಾಗಿದೆ. ಬಿಸಿಸಿಐ ಮತ್ತು ಇನ್ನಿತರೆ ಸದಸ್ಯ ಮಂಡಳಿಗಳು ಭಾಗವಹಿಸದಿದ್ದರೆ ಟೂರ್ನಿಯ ಸ್ವರೂಪವೇ ಕುಂದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಮುಂದಿನ ಐದು ದಿನಗಳಲ್ಲಿ ನಿರ್ಣಾಯಕ ತೀರ್ಮಾನ

ಸಭೆಗೆ ಕೇವಲ ಐದು ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಎಸಿಸಿಯಿಂದ ಯಾವುದೇ ನವೀಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಎಸಿಸಿಯು ಸ್ಪಷ್ಟ ನಿರ್ಧಾರ ಕೈಗೊಂಡು, ಸಭೆಯ ಸ್ಥಳ ಬದಲಿಸುವದೆಯೇ ಅಥವಾ ಬದಲಿಸದೆಯೇ ಎಂಬುದು ಮುಂದಿನ ಕೆಲ ದಿನಗಳಲ್ಲಿ ಬಹುಮುಖ್ಯವಾಗಲಿದೆ.