ವೋಕ್ಸ್‌ವ್ಯಾಗನ್‌ ಹಾಗೂ ಔಡಿ ನಡುವೆ ಭೀಕರ ಅಪಘಾತ – ಇಬ್ಬರು ಕೊನೆಯುಸಿರೆಳೆದರು

ಚೆನ್ನೈ ಎಕ್ಸ್‌ಪ್ರೆಸ್ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕಸಬ್ಬೇನಹಳ್ಳಿ ಬಳಿ ವೋಕ್ಸ್‌‌ವ್ಯಾಗನ್‌ ಮತ್ತು ಔಡಿ ಕಾರು ಮಧ್ಯೆ ಡಿಕ್ಕಿಯಾಗಿದೆ. ಈ ಭೀಕರ ಕಾರು ಅಪಘಾತವೊಂದರಲ್ಲಿ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಭೀಕರ ರಸ್ತೆ ಅಪಘಾತ ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ವೋಕ್ಸ್‌‌ವ್ಯಾಗನ್‌ ಮತ್ತು ಔಡಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಕೆಜಿಎಫ್ ಮೂಲದ ಈಶ್ವರ್ (25) ಮತ್ತು ಜನನಿ (18) ಎಂಬ ಯುವಕ-ಯುವತಿ ಸಾವನ್ನಪ್ಪಿದ್ದಾರೆ. ಈ ಭೀಕರ ರಸ್ತೆ ಅಪಘಾತ ಮಾಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ವೋಕ್ಸ್‌‌ವ್ಯಾಗನ್‌ – ಔಡಿ ಕಾರು ಮಧ್ಯೆ ಡಿಕ್ಕಿ!

ಕೆಜಿಎಫ್ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೋಕ್ಸ್‌‌ವ್ಯಾಗನ್‌ ಕಾರು, ಎದುರು ದಿಕ್ಕಿನಿಂದ ಬರುತ್ತಿದ್ದ ಔಡಿ ಕಾರಿಗೆ ಡಿಕ್ಕಿಹೊಡೆದಿದೆ. ಈ ರಸ್ತೆಯ ಒಂದು ಭಾಗ ರಿಪೇರಿಗಾಗಿ ಮುಚ್ಚಲಾಗಿದ್ದರಿಂದ, ಎರಡೂ ದಿಕ್ಕಿನ ವಾಹನಗಳಿಗೆ ಒಂದೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಈ ಘಟನೆಗೆ ಮುಖ್ಯ ಕಾರಣವಾಗಿದೆ ಎಂದು ಪೊಲೀಸರು ಆರಂಭಿಕ ತನಿಖೆಯಿಂದ ತಿಳಿಸಿದ್ದಾರೆ.